ಉಪಯುಕ್ತ ಸುದ್ದಿ

HPCLನಲ್ಲಿ 608 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು: ಪರೀಕ್ಷೆಯಿಲ್ಲದೆ ಆಯ್ಕೆ, ₹25,000 ಸ್ಟೈಫಂಡ್

Share It

ಸಾರ್ವಜನಿಕ ವಲಯದ ತೈಲ ಸಂಸ್ಥೆಯಾದ Hindustan Petroleum Corporation Limited (HPCL) 2026ನೇ ಸಾಲಿಗೆ 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಇಂಜಿನಿಯರಿಂಗ್ ಪದವೀಧರರಿಗೆ ಕೈಗಾರಿಕಾ ಅನುಭವದೊಂದಿಗೆ ವೃತ್ತಿಜೀವನ ಆರಂಭಿಸಲು ಇದು ಉತ್ತಮ ಅವಕಾಶವಾಗಿದೆ.

ಈ ಅಪ್ರೆಂಟಿಸ್ ಅವಧಿ ಒಂದು ವರ್ಷದಾಗಿದ್ದು, ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯಲಿದೆ. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ BE/B.Tech ಪದವಿ ಹೊಂದಿರಬೇಕು. 2023ರ ಏಪ್ರಿಲ್ 1 ನಂತರ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರು. ಸಾಮಾನ್ಯ, ಓಬಿಸಿ (ಎನ್‌ಸಿಎಲ್) ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 60% ಅಂಕಗಳು ಕಡ್ಡಾಯ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 50% ಅಂಕಗಳು ಅಗತ್ಯ.

ವಯೋಮಿತಿ: 2026ರ ಮಾರ್ಚ್ 2ರಂತೆ ಅಭ್ಯರ್ಥಿಗಳ ವಯಸ್ಸು 18ರಿಂದ 25 ವರ್ಷಗಳ ನಡುವೆ ಇರಬೇಕು. ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಸ್ಟೈಫಂಡ್ : ಆಯ್ಕೆಯಾದವರಿಗೆ ಮಾಸಿಕ ₹25,000 ಸ್ಟೈಫಂಡ್ ನೀಡಲಾಗುತ್ತದೆ. ಇದರಲ್ಲಿ ₹20,500 HPCLನಿಂದ ಹಾಗೂ ₹4,500 ಕೇಂದ್ರ ಸರ್ಕಾರದ ಡಿಬಿಟಿ ಯೋಜನೆಯಡಿ ಲಭ್ಯವಾಗುತ್ತದೆ.

ಅರ್ಜಿ ಪ್ರಕ್ರಿಯೆ: ಅರ್ಜಿಗಳು ಆನ್‌ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತವೆ ಮತ್ತು ಯಾವುದೇ ಅರ್ಜಿ ಶುಲ್ಕವಿಲ್ಲ. ಆಸಕ್ತರು hindustanpetroleum.com ಅಥವಾ jobs.hpcl.co.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು NATS 2.0 ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಫೆಬ್ರವರಿ 16ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 2 ಕೊನೆಯ ದಿನಾಂಕವಾಗಿದೆ.


Share It

You cannot copy content of this page