ಉಪಯುಕ್ತ ಸುದ್ದಿ

BTM ಲೇಔಟ್ ನ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

Share It

ಬೆಂಗಳೂರು: ಬಿಟಿಎಂ ಬಡಾವಣೆಯಲ್ಲಿ ಶಾಸಕರ ವಿಶೇಷ ಕ್ಷೇತ್ರ ಅನುದಾನದಲ್ಲಿ  KAS ಆಫೀಸರ್ ಕಾಲೋನಿಯ ಮುಖ್ಯರಸ್ತೆಗಳಿಗೆ ಹಾಗೂ ಅಡ್ಡರಸ್ತೆಗಳಿಗೆ  ಡಾಂಬರೀಕರಣ ಕಾಮಗಾರಿಗೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ಪಂದನಾ ನಾಗರಿಕರ ವೇದಿಕೆ ಕಟ್ಟಡದ ಹತ್ತಿರ, 38 ನೇ ಮುಖ್ಯರಸ್ತೆ, KAS ಕಾಲೋನಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ  ಮಾರ್ಗದರ್ಶನದಲ್ಲಿ  ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಮಡಿವಾಳ ಕೆರೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿ.ಎನ್.ಆರ್ ಬಾಬು, ಮಾಜಿ  ಬಿಬಿಎಂಪಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿ, ಜಿ.ಬಿ.ಎ ಅಧಿಕಾರಿಗಳು, ಸ್ಪಂದನಾ ನಾಗರಿಕರ ವೇದಿಕೆ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


Share It

You cannot copy content of this page