ಉಪಯುಕ್ತ ಸುದ್ದಿ

ವಿಜಯಕುಮಾರ್ ಸಿಗರನಹಳ್ಳಿಗೆ ರೋಹಿತ್ ರಾಜಣ್ಣ ಮಾಧ್ಯಮ ಪ್ರಶಸ್ತಿ

Share It


ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆ ಕೊಡಮಾಡುವ ರೋಹಿತ್ ರಾಜಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಪ್ರಜಾವಾಣಿಯ ವರದಿಗಾರರಾರ ವಿಜಯ್ ಕುಮಾರ್ ಸಿರಗನಹಳ್ಳಿ ಆಯ್ಕೆಯಾಗಿದ್ದಾರೆ.

ಮೂಲತಃ ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕಿನವರಾದ ವಿಜಯಕುಮಾರ್ ಅವರು, ಹಾಸನದ ಜ್ಞಾನದೀಪ, ಹಾಸನಮಿತ್ರ, ಜನಮಿತ್ರ, ವಿಜಯವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಪ್ರಜಾವಾಣಿಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕೆಲ ವರ್ಷಗಳ ಕಾಲ ಕಾರ್ಯನಿರ್ವಹಿದ ಅವರು ಪ್ರಸ್ತುತ ಪ್ರಜಾವಾಣಿಯ ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜನಪರ ಬರಹಗಳು, ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಅವರು, ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು 2015 ರಲ್ಲಿ ಪ್ರಕಟ ಮಾಡಿರುವ ಬೂದಿಯಾಗದ ಕೆಂಡ ಕೃತಿಯ ಒಂದು ಲೇಖನ ಅನ್ನಕ್ಕಾಗಿ ರಾತ್ರಿಯಡೀ ಕಾದದ್ದು ಎಂಬ ಲೇಖನವು ಮೈಸೂರು ವಿಶ್ವವಿದ್ಯಾನಿಲಯದ ಬಿಎ ನಾಲ್ಕನೇ ಸೆಮಿಸ್ಟರ್‌ನ ಪಠ್ಯವಾಗಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.

ರೋಹಿತ್ ರಾಜಣ್ಣ ಅತ್ಯಂತ  ಕಿರಿಯ ವಯಸ್ಸಿನಲ್ಲಿ ವಿಜಯ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಗಾರರಾಗಿ ಅತ್ಯಂತ ಜನಪ್ರಿಯರಾಗಿದ್ದರು. ಅವರು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಅವರ ತಂದೆ ರಾಜಣ್ಣ ಪ್ರತಿವರ್ಷ ತಮ್ಮ ಪುತ್ರನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದಾರೆ. ಅವರ ಶ್ರಮಕ್ಕೆ ಐಎಂಎಸ್‌ಆರ್ ಕೈಜೋಡಿಸುವ ಕೆಲಸ ಕೈಗೊಂಡಿದೆ.

ಐಎಂಎಸ್‌ಆರ್ ಸಂಸ್ಥೆಯನ್ನು ಪತ್ರಕರ್ತರು ಮತ್ತು ಪತ್ರಿಕಾ ಶಿಕ್ಷಣ ಕ್ಷೇತ್ರದ ತಜ್ಞರು ಸ್ಥಾಪಿಸಿದ್ದು, ಯುವ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನದಲ್ಲಿ ತರಬೇತಿ ಮತ್ತು ಉತ್ತೇಜನ ನೀಡುವ ಕಾರ್ಯಕೈಗೊಂಡಿದೆ.


Share It

You cannot copy content of this page