ಬೆಂಗಳೂರು: ಎಂಎ ಕನ್ನಡದಲ್ಲಿ ೧೦ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ತಬ್ಬಲಿ ಯುವತಿ ತೇಜಸ್ವಿನಿ ಅವರಿಗೆ ಶ್ರೀ ಎಂ.ತಿಮ್ಮಯ್ಯ ವಿದ್ಯಾಚೇತನ ಪಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಕೈಗಾರಿಕಾ ವಾಣಿಜ್ಯೋತಿಮ ಕನ್ನಡ ಸಂಘಗಳ ಒಕ್ಕೂಟ ಭಾನುವಾರ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡದಲ್ಲಿ ೧೦ ಚಿನ್ನದ ಪದಕ ಹಾಗೂ ೪ ನಗದು ಬಹುಮಾನ ಗಳಿಸಿದ ತಬ್ಬಲಿ ಹುಡುಗಿ ತೇಜಸ್ವಿನಿ ಅವರನ್ನು ಸನ್ಮಾನಿಸಲಾಯಿತು. ಅವರಿಗೆ ಸಂಘದ ವತಿಯಿಂದ ಆರಂಭಿಸಿರುವ “ಶ್ರೀ ಎಂ.ತಿಮ್ಮಯ್ಯ ವಿದ್ಯಾಚೇತನ ಪ್ರಶಸ್ತಿ” ಪ್ರಧಾನ ಮಾಡಲಾಯಿತು.
ಪ್ರಶಸ್ತಿಯು ಫಲಕದೊಂದಿಗೆ ಹತ್ತು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. ಒಕ್ಕೂಟದ ಅಧ್ಯಕ್ಷರ ಹೆಸರಿನಲ್ಲಿರುವ ಪ್ರತಿಷ್ಠಿತ ಪ್ರಶಸ್ತಿ ಶ್ರೀ ವಿದ್ಯಾ ಶ್ರೀ ಎಂ ತಿಮ್ಮಯ್ಯ ವಿದ್ಯಾ ಚೇತನ ಪ್ರಶಸ್ತಿ ಇದಾಗಿದ್ದು, ಶಿಕ್ಷಣ ತಜ್ಞರಾದ ನಾಡೋಜ ಡಾ. ವೋಡೆ ಪಿ ಕೃಷ್ಣ ಅವರು ಪ್ರಧಾನ ಮಾಡಿದರು.
ತಜ್ಞರಾದ ಡಾ.ನಿರಂಜನಾರಾಧ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡಿಗರ ಚಿನ್ನದ ಹುಡುಗಿ ಮುಂದಿನ ಪಿ.ಎಚ್.ಡಿ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಕಾರ್ಯಾಧ್ಯಕ್ಷ ಸಿದ್ಧಯ್ಯ, ಪ್ರಧಾನ ಕಾರ್ಯದರ್ಶಿ ಸು. ಜಗದೀಶ್ ಮತ್ತು ಹೇಮಂತ್ ಕುಮಾರ್ ಜಿ ಮತ್ತು ಖಜಾಂಚಿ ಬಿ.ಜೆರಾಜೇಶ್ ಉಪಸ್ಥಿತರಿದ್ದರು.