ರಾಜಕೀಯ ಸುದ್ದಿ

ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಿದ ತಕ್ಷಣವೇ ಮಹಾದಾಯಿ ಕಳಸಾ-ಬಂಡೂರಿ ಕಾಮಗಾರಿ: ನೀರಾವರಿ ಸಚಿವ ರಾಮಲಿಂಗಾರಡ್ಡಿ

Share It

ನವಲಗುಂದ: ಉತ್ತರಕರ್ನಾಟಕದ ಪ್ರಮುಖ ಬೇಡಿಕೆಯಾದ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರದ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಸಿದ್ದವಿದೆಯಂದು ಬಾರಿ ಜಲಸಂಪನ್ಮೂಲ ಸಚಿವ ರಾಮಲಿಂಗಾರಡ್ಡಿ ಹೇಳಿದರು.

ಹುಬ್ಬಳ್ಳಿಯಿಂದ ಆಲಮಟ್ಟಿಗೆ ಹೋಗುವ ಸಂದರ್ಭದಲ್ಲಿ ನವಲಗುಂದ ಲಿಂಗರಾಜ ಸರ್ಕಲ್‌ ರೈತ ವೀರಗಲ್ಲಿಗೆ ಮಾಲಾರ್ಪನೆ ಮಾಡಿ ರೈತರಿಂದ ಮನವಿ ಸ್ವಿಕರಿಸಿ ಮಾತನಾಡಿದ ಅವರು ಈಗಾಗಲೇ ಮಹಾದಾಯಿ ಕಳಸಾ -ಬಂಡೂರಿ ಯೋಜನೆ ಜಾರಿ ಮಾಡಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ನಾನು ಸೇರಿ ಕೇಂದ್ರ ಸರ್ಕಾರದ ವನ್ಯ ಜೀವಿ ಮಂಡಳಿಯಿಂದ ಅನುಮತಿ ಕೊಡಬೇಕೆಂದು ಮನವಿ ಮಾಡಿದ್ದೇವೆ ರಾಜ್ಯ ಸರ್ಕಾರ ಟೆಂಡರ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದೇವೆ.

ಮಹದಾಯಿ ಹೋರಾಟಗಾರ ಹಾಗೂ ನವಲಗುಂದ ಶಾಸಕ ಎನ್.‌ ಹೆಚ್.‌ ಕೋನರಡ್ಡಿ ಅವರು ಈ ಯೋಜನೆ ಜಾರಿಯಾಗುವವರೆಗೆ ಹೋರಾಟ ಮುಂದುವರೆಸುತ್ತಾ ಬಂದಿದ್ದಾರೆ. ಇವರು ಬಂದು ಹೋಗಬೇಕೆಂದು ಹೇಳಿದ್ದಕ್ಕೆ ಬಂದಿದ್ದೇನೆ ಎಂದರು, ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ರಾಮಲಿಂಗಾರಡ್ಡಿ ಹೇಳಿದರು.

ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ವೀಕ್ಷಣೆ : ನವಲಗುಂದ ಬೆಳವಟಗಿ ಹತ್ತಿರ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಕೈಗೊಂಡಿರುವುದನ್ನು ವೀಕ್ಷಣೆ ಮಾಡಿ ಕಾಮಗಾರಿ ಕೈಗೊಂಡಿದ್ದರಿಂದ ಜಮೀನು ಹಾಗೂ ಗ್ರಾಮಗಳಿಗೆ ನೀರು ನುಗ್ಗುವದು ಕಡಿಮೆಯಾಗಿ ಹಾನಿಯಾಗದಂತೆ ನೋಡಿಕೊಳ್ಳಬಹುದು, ಕೇಂದ್ರ ಸರ್ಕಾರಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ 1600 ಕೋಟಿಗೆ ಡಿಪಿಆರ್‌ ತಯಾರಿಸಿ ಅನುಮತಿ ಪಡೆಯುವದು ಬಾಕಿ ಉಳಿದ ಕಾಮಗಾರಿ ಕೈಗೊಳ್ಳುತ್ತೇವೆ. ಗುತ್ತಿಗೆದಾರರಿಗೆ ಬಾಕಿ ಇರುವ ಕಾಮಗಾರಿ ಮೊತ್ತವನ್ನು ಪಾವತಿ ಮಾಡಲು ಕಂದಾಯ ಇಲಾಖೆಯಿಂದ ಅನುದಾನಕ್ಕಾಗಿ ಬಿಡುಗಡೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಶಾಸಕರನ್ನು ಕರೆದುಕೊಂಡು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೆಳಿದರು.

ಈ ಸಂದರ್ಭದಲ್ಲಿ ಮಹಾದಾಯಿ ಕಳಸಾ-ಬಂಡೂರಿ ಹಾಗೂ ರೈತಪರ ಹೋರಾಟಗಾರರಾದ ಯಲ್ಲಪ್ಪ ದಾಡಿಬಾಯಿ, ಸುಬಾಸಚಂದ್ರಗೌಡ ಪಾಟೀಲ, ಮಲಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ನವಲಗುಂದ ಗ್ಯಾರೆಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ,  ಆನಂದ ಹವಳಕೋಡ, ಪ್ರಕಾಶ ಶಿಗ್ಲಿ, ಮೋದಿನಸಾಬ ಶಿರೂರ, ಜೀವನ ಪವಾರ, ಉಸ್ಮಾನ ಬಬರ್ಚಿ, ಆಕಾಶ ಮೂಲಿಮನಿ, ಸಾಗರ ಜೈನರ, ದಾವಲಸಾಬ ಖುದ್ದಣ್ಣವರ, ಮೃತ್ಯುಂಜಯ ಜಾಬಿನ, ಪ್ರಭಾಕರ ಮೋಹಿತೆ, ಅಲ್ಲಾಸಾಬ ಕಲ್ಲಕುಟ್ರಿ, ಕುಮಾರ ಲಕ್ಕಮ್ಮನವರ, ಮದರಸಾಬ ಉಗರಗೋಳ, ತುಕಾರಾಮ ಜಾಧವ, ಸಂಗಪ್ಪ ನಿಡವಣಿ, ಶೇಖಣ್ಣ ಕಡ್ಲಿ, ನಾಗನಗೌಡ ಪಾಟೀಲ, ಮಲ್ಲಪ್ಪ ಕಿರೆಸೂರ, ನಿಂಗಪ್ಪ ಹರಿವಾಳದ, ಅಶೋಕ ಮದಗುಣಕಿ, ನೀರಾವರಿ ಇಲಾಖೆಯ ಕಾರ್ಯದರ್ಶಿ ಶಿವಕುಮಾರ, ಜಗದೀಶರೆಡ್ಡಿ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಅಭಿಯಂತರ ಲಕ್ಷಣ ನಾಯಕ, ಅಧೀಕ್ಷಕ ಅಭಿಯಂತರ ಗಿರೀಶ ಮೇಟಿ, ಕಾರ್ಯನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಜಾಲಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share It

You cannot copy content of this page