ಬೆಂಗಳೂರು: ಬೆಂಗಳೂರಿನ ಫುಟ್‌ಪಾತ್ ತೆರವಿನ ಕಠಿಣ ನಿಲುವಿನ ನಂತರ ಸರಕಾರ ಮತ್ತೊಂದು ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ.
ನಗರದಲ್ಲಿ ಫುಟ್ ಪಾತ್ ಮೇಲೆ ವಾಹನ ಚಲಾಯಿಸುವ ಸವಾರರಿಗೆ ವಿಧಿಸುವ ದಂಡವನ್ನು ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ. ಈ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಹತ್ವದ ಪತ್ರ ಬರೆದಿದ್ದಾರೆ.
ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರಿಗೆ ಬರೆದಿರುವ ಕೃಷ್ಣ ಬೈರೇಗೌಡ ಅವರು, ನಗರದ ಪುಟ್‌ಪಾತ್ ತೆರವಿಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪುಟ್ ಪಾತ್ ಪಾದಚಾರಿಗಳಿಗೆ ಸುರಕ್ಷಿತವಾಗಿರಬೇಕಾದರೆ, ಅದನ್ನು ಮತ್ತಷ್ಟು ಸುರಕ್ಷಿತಗೊಳಿಸಬೇಕು ಎಂದಿದ್ದಾರೆ.
ಆದರೆ, ಪುಟ್ ಪಾತ್ ಮೇಲೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದಂಡದ ಮೊತ್ತವೂ ಕಡಿಮೆ ಇದೆ. ಹೀಗಾಗಿ, ಪುಟ್ ಪಾತ್ ಮೇಲಿನ ವಾಹನ ಚಲಾಯಿಸುವಿಕೆಗೆ ದಂಡದ ಮೊತ್ತವನ್ನು 5000 ರು.ಗೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕೃಷ್ಣ ಬೈರೇಗೌಡರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಾರಿಗೆ ಇಲಾಖೆ ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸರು, ದಂಡದ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಪರಿಶೀಲನೆಗೆ ಮುಂದಾಗಿದೆ. ಇದು ಸಾಕಾರವಾದರೆ, ಪುಟ್ ಪಾತ್ ಮೇಲೆ ಸವಾರಿ ಮಾಡುವ ವಾಹನ ಸವಾರರಿಗೆ 5000 ರು. ದಂಡ ಬೀಳಲಿದೆ.

