ಸುದ್ದಿ

ಕಸಾಪ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಗೆ “ವೈಟ್ ಪೇಪರ್” ಸಾಧಕ ಪ್ರಶಸ್ತಿ ಪ್ರದಾನ

Share It

ಬೆಂಗಳೂರು: ಚನ್ನರಾಯಪಟ್ಟಣ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಅವರಿಗೆ ವೈಟ್ ಪೇಪರ್ ವತಿಯಿಂದ ನೀಡುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚನ್ನರಾಯಪ ಪಟ್ಟಣದ ಬೆಳಸಿಂದ ಸಸ್ಯೋದ್ಯಾನದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಹಾಸನದ ಸಂಸದ ಶ್ರೇಯಸ್ ಪಟೇಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವೈಟ್ ಪೇಪರ್ ಸಂಸ್ಥೆಯು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸಾಧಕ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದು, ಹದೇನಹಳ್ಳಿ ಲೋಕೇಶ ಅವರನ್ನು ಆಯ್ಕೆ ಮಾಡಲಾಗಿತ್ತು.

ಕನ್ನಡ ಭಾಷೆ ಮತ್ತು ನಾಡು ನುಡಿಯ ಹೋರಾಟ ಕುರಿತಂತೆ ಮಾಡಿದ ಹೋರಾಟವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸಂಸ್ಥೆ ಪ್ರತಿ ವರ್ಷವೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸುತ್ತಿದ್ದು, ಇತ್ತೀಚೆಗೆ ನಾಲ್ಕನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮ ನಡೆಸಿತ್ತು. ಕಾರ್ಯಕ್ರಮದ ಅಂಗವಾಗಿ ಲೊಕೇಶ್ ಅವರನ್ನು ಸನ್ಮಾನಿಸಲಾಗಿತ್ತು.
ಈ ಸಂದರ್ಭದಲ್ಲಿ ಸ್ಥಳೀಯ ನಾಯಕಾರದ ಅನತಿ ಶೇಖರ್, ಶಶಿಧರ್ ಟಿವಿಎಸ್ ಶೋ ರೂಮ್, ಚನ್ನರಾಯಪಟ್ಟಣ ಪತ್ರಕರ್ತರ ಸಂಘದ ಅಧ್ತಕ್ಷ ದಯಾನಂದ್ ಶೆಟ್ಟಿಹಳ್ಳಿ, ಭೀಮ್ ಆರ್ಮಿ ಅಧ್ಯಕ್ಷ ಮಂಜುನಾಥ್ ಹಿರಿಬಿಳ್ತಿ, ಪತ್ರಕರ್ತರಾದ ಸಿದ್ದರಾಜು ಸೇರಿ ಅನೇಕರು ಇದ್ದರು.


Share It

You cannot copy content of this page