ಬೆಂಗಳೂರು: ರಾಮಲಿಂಗ ರೆಡ್ಡಿ ಅವರ ಒತ್ತಡಕ್ಕೆ ಕೊನೆಗೂ ಮಣಿದಿರುವ ಹೈಕಮಾಂಡ್ ನಗರಾಭಿವೃದ್ಧಿ ಖಾತೆ ಬದಲಾವಣೆಗೆ ತೀರ್ಮಾನಿಸಿದೆ. ಪ್ರಸ್ತುತ ಖಾತೆ ಹಂಚಿಕೆ ವೇಳೆ ಬದಲಾವಣೆ ಪಕ್ಕಾ ಎನ್ನುತ್ತಿವೆ ಮೂಲಗಳು.
ರಾಮಲಿಂಗಾ ರೆಡ್ಡಿ ಅವರಿಗೆ ನಗರಾಭಿವೃದ್ಧಿ ಇಲಾಖೆ ನೀಡಬೇಕು ಎಂದು ನಿಗದಿಯಾಗಿತ್ತು. ಆದರೆ, ಹೈಕಮಾಂಡ್ ಕೃಷ್ಣ ಬೈರೇಗೌಡ ಅವರನ್ನು ಆ ಖಾತೆಗೆ ತಂದು ಕೂರಿಸಿತ್ತು. ಇದರಿಂದ ರಾಮಲಿಂಗಾ ರೆಡ್ಡಿ ರಾಜೀನಾಮೆಗೆ ಮುಂದಾಗಿದ್ದು, ಅನಂತರ ಸಿಎಂ ಮನವೊಲಿಸಿ ಅವರನ್ನು ರಾಜೀನಾಮೆ ವಾಪಸ್ ಪಡೆಯುವಂತೆ ಮಾಡಿದ್ದರು.
ಆದರೆ, ಇದೀಗ ಖಾತೆಗಳ ಮರುಹಂಚಿಕೆ ನಡೆಯಲಿದ್ದು, ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ವಾಪಸ್ ನೀಡಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಜಿಬಿಎ ಚುನಾವಣೆಯಿದ್ದು, ರಾಮಲಿಂಗಾ ರೆಡ್ಡಿ ಅವರು ಉಸ್ತುವಾರಿಯಿದ್ದರೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ.
Updating….

