ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ನ 13ನೇ ಸೀಸನ್ ಈ ಬಾರಿ ಅನೇಕ ಹೊಸ ಆಶ್ಚರ್ಯಗಳನ್ನು ತಂದಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಈ ಸಲ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಸ್ಪರ್ಧಿಗಳೂ ‘ದೊಡ್ಮನೆ’ ಪ್ರವೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ. ‘ಒಂದು ಮನೆ, ಒಂದು ಅವಕಾಶ, ಕೋಟಿ ಕನಸು… ಮತ್ತೆ ಶುರು ಮಾಡೋಣ್ವಾ?’ ಎಂಬ ಸಂದೇಶದೊಂದಿಗೆ ಪ್ರೋಮೋ ಕುತೂಹಲ ಹೆಚ್ಚಿಸಿದೆ.
ಈ ಬಾರಿಯ ಶೋನಲ್ಲಿ ಸಾಮಾನ್ಯರ ಆಯ್ಕೆಗಾಗಿ ವಿಶೇಷ ‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ ಎಂಬ ಅಡಿಷನ್ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಲಕ್ಷಾಂತರ ಅರ್ಜಿಗಳಿಂದ ಶಾರ್ಟ್ ಲಿಸ್ಟ್ ಆದ ಸ್ಪರ್ಧಿಗಳು ದೈಹಿಕ, ಬೌದ್ಧಿಕ ಮತ್ತು ಇತರೆ ಬಹುಮುಖಿ ಟಾಸ್ಕ್ಗಳನ್ನು ಎದುರಿಸಬೇಕಾಗುತ್ತದೆ. ಈ ‘ಅಗ್ನಿ ಪರೀಕ್ಷೆ’ಯಲ್ಲಿ ಆಯ್ಕೆಯಾದವರು ನೇರವಾಗಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಪ್ರವೇಶಿಸಲಿದ್ದಾರೆ.
ಈ ಪರೀಕ್ಷೆಯ ತೀರ್ಪುಗಾರರಾಗಿ (ಜಡ್ಜ್) ಬಿಗ್ ಬಾಸ್ನ ಖ್ಯಾತ ಮಾಜಿ ಸ್ಪರ್ಧಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಮೂಲಗಳ ಪ್ರಕಾರ, ಸೀಸನ್ 10ರ ‘ಗತ್ತು ಗಾಂಭೀರ್ಯ’ದ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ, ಸೀಸನ್ 12ರ ವಿಜೇತ ‘ಗಿಲ್ಲಿ’ ನಟ, ಮತ್ತು ಸೀಸನ್ 3ರ ವಿಜೇತ ನಟಿ ಶ್ರುತಿ ಅವರು ಜಡ್ಜ್ಗಳಾಗಿ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ. ಇವರ ಕಟು ಪ್ರಶ್ನೆಗಳು ಮತ್ತು ಮೌಲ್ಯಮಾಪನವು ಸಾಮಾನ್ಯ ಸ್ಪರ್ಧಿಗಳಿಗೆ ನಿಜವಾದ ಅಗ್ನಿ ಪರೀಕ್ಷೆಯಂತೆಯೇ ಇರುತ್ತದೆ.
‘ಅಗ್ನಿ ಪರೀಕ್ಷೆ’ಯ ನಿರೂಪಣೆಯ ಬಗ್ಗೆ ಕುತೂಹಲ ಹೆಚ್ಚಿದ್ದು, ಸೀಸನ್ 5ರ ಸ್ಪರ್ಧಿ ಮತ್ತು ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ಹೋಸ್ಟ್ ಆಗಲಿದ್ದಾರೆ ಎಂದು ಹೇಳಲಾಗಿದೆ. ನಿರಂಜನ್ ದೇಶಪಾಂಡೆ ಅವರ ಹೆಸರೂ ಚರ್ಚೆಯಲ್ಲಿದೆ. ಕಿಚ್ಚ ಸುದೀಪ್ ಅವರು ‘ಬಿಲ್ಲಾ ರಂಗ ಬಾಷಾ’ ಚಿತ್ರದ ಬಿಡುಗಡೆಯ ಬ್ಯುಸಿಯಲ್ಲಿರುವುದರಿಂದ ಅವರು ಈ ಅಡಿಷನ್ ಪ್ರಕ್ರಿಯೆಯನ್ನು ನಡೆಸಿಕೊಡುವುದು ಅನುಮಾನವಿದೆ.
‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 13ರ ಮುಖ್ಯ ಶೋ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿ

