ಸಚಿವ ರಾಯರೆಡ್ಡಿ ಹೇಳಿಕೆಯಿಂದ ಇಸ್ಲಾಮೇತರ ಧರ್ಮಿಯರ ಮನಸ್ಸಿಗೆ ನೋವಾಗಿದೆ:ಬಸವರಾಜ ಬೊಮ್ಮಾಯಿ
ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಅತಿ ಬುದ್ದಿವಂತ ಸಚಿವ ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ತಾವು ಪ್ರಮಾಣ ವಚನ ಮಾಡಿರುವ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಸಂವಿಧಾನದ ಮೂಲ ಆಶಯ ಧರ್ಮ ನಿರಪೇಕ್ಷತೆಯನ್ನು ಹೇಳಿದೆ. ಒಬ್ಬ ಸಚಿವರಾಗಿ ಒಂದು ಧರ್ಮ ಇನ್ನೊಂದು ಧರ್ಮಕ್ಕಿಂತ ಶ್ರೇಷ್ಠ ಎನ್ನುವ ಮಾತನಾಡುವ ಮುಖಾಂತರ ಇಸ್ಲಾಂ ಅಲ್ಲದ ಇತರದ ಧರ್ಮಿಯರ ಮನಸಿಗೆ ನೋವು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ರಾಯರೆಡ್ಡಿಯವರು ಸಮಾಜದಲ್ಲಿ ಕೋಮು ಸೌಹಾರ್ದತೆ ಕೆದಕಿದ್ದಾರೆ. ಇದು ಒಬ್ಬ ಸಚಿವರು ಮಾಡುವ ಕೆಲಸವಲ್ಲ. ಕೂಡಲೇ ಅವರು ಕ್ಷಮಾಪಣೆ ಕೇಳಬೇಕು ಇಲ್ಲದಿದ್ದರೆ, ಸಿಎಂ ಡಿ.ಕೆ. ಶಿವಕುಮಾರ ಅವರ ಮೇಲೆ ಕ್ರಮ ಜರುಗಿಸಬೇಕೆಂದು ರಾಜ್ಯದ ಜನತೆಯ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ.

