ಉಪಯುಕ್ತ ಸುದ್ದಿ

ಪಿಓಪಿ ಗಣೇಶ ವಿಗ್ರಹಗಳ ತಯಾರಿಕೆ/ ಮಾರಾಟ ತಡೆಗಟ್ಟಲು ವಿಶೇಷ ತನಿಖಾದಳ ರಚನೆ : ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ 

Share It

ಬೆಂಗಳೂರು: ರಾಜ್ಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪರಿಸರಕ್ಕೆ ಹಾನಿಯಾಗುವ ಪಿಓಪಿ ಗಣೇಶ ವಿಗ್ರಹಗಳ ತಯಾರಿಕೆ/ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು, ರಾಮನಗರ, ಮೈಸೂರು, ಮಂಗಳೂರು, ಬೆಳಗಾವಿ, ದಾವಣಗೆರೆ, ದಾರವಾಡ, ಕಲಬುರಗಿ ಮತ್ತು ವಿಜಯನಗರದಲ್ಲಿ  ಅರಣ್ಯ ಇಲಾಖೆ ವತಿಯಿಂದ ಗಣೇಶ ಮೂರ್ತಿಗಳ ಗುರುತಿಸುವಿಕೆ, ಮಾರಾಟ ತಡೆಗಟ್ಟುವಿಕೆ ಹಾಗೂ ವಶಪಡಿಸಿಕೊಳ್ಳುವಿಕೆಗಾಗಿ ವಿಶೇಷ ಕಾರ್ಯಪಡೆ ತಂಡವನ್ನು ರಚಿಸಲಾಗಿದೆ.

ದಿನಾಂಕ: 18/08/2026 ರಿಂದ 02/09/2026 ರವರೆಗೆ, ಸದರಿ ತಂಡವು ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಸರ್ಕಾರದ ಮಾರ್ಗದರ್ಶನವನ್ನು ಪಾಲಿಸದೆ ತಯಾರಿಸಲಾಗುತ್ತಿದ್ದ 153 ಮಳಿಗೆ/ಗೋದಾಮುಗಳ ಪರಿವೀಕ್ಷಣೆ ನಡೆಸಿ, 872 ಪಿಓಪಿ ಗಣೇಶ ಮೂರ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ. 

ಕರ್ನಾಟಕ ಸರ್ಕಾರವು ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸುವುದು, ಸಾಗಿಸುವುದು, ಮಾರಾಟ ಹಾಗೂ ವಿಸರ್ಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. 

ಸಾರ್ವಜನಿಕರಲ್ಲಿ‌ ಮಾನ್ಯ ಅರಣ್ಯ ಸಚಿವರ  ಮನವಿ*:

• ಮಣ್ಣಿನ ಗಣೇಶ ಮೂರ್ತಿಗಳನ್ನೇ ಬಳಸಿ, ಪರಿಸರ ಹಾಗೂ ಜಲಚರಗಳನ್ನು ಸಂರಕ್ಷಿಸಲು ಕೈ ಜೋಡಿಸಿ.

• ಜೈವಿಕವಾಗಿ ಕರಗುವ ಮಣ್ಣಿನ ಮೂರ್ತಿಗಳು ಜಲಮಾಲಿನ್ಯ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುತ್ತವೆ. 

• ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳನ್ನು ಬಳಸದೆ, ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವುದು.


Share It

You cannot copy content of this page