ಸುದ್ದಿ

ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತಷ್ಟು ಹೈಟೆಕ್: ವಿವಿಧ ಕಾಮಗಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ 

Share It

ಬೆಂಗಳೂರು: ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ರೂ.38 ಕೋಟಿ‌ ವೆಚ್ಚದಲ್ಲಿ ಪ್ರವಾಸಿಗರ ಸ್ನೇಹಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಿದರು. 

ಸೋಮವಾರ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ, ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣ ಹಾಗೂ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ  ಉದ್ದೇಶದಿಂದ ಈ ಕೆಳಕಂಡ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. 

1)  ಪ್ರವಾಸಿಗರ ಸವಾರಿಗೆ ಅನುಕೂಲವಾಗಲು ನೂತನ ಎಲೆಕ್ನಿಕ್ ವಾಹನಗಳಿಗೆ ಚಾಲನೆ

2) ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ಕಚೇರಿ “ಅಡವಿ” ಕಟ್ಟಡ ಉದ್ಘಾಟನೆ

3) ಲೈವ್ ಫೀಡ್ ಘಟಕ ಉದ್ಘಾಟನೆ 

4)  ಕೇಂದ್ರೀಯ ನರ್ಸರಿ ಉದ್ಘಾಟನೆ

5)  ನೂತನ ಕ್ಯಾರಂಟೈನ್ ಬ್ಲಾಕ್ ಗೆ ಚಾಲನೆ 

6)  ಉದ್ಯಾನವನದ ನವೀಕೃತ ಮುಖ್ಯ ಪ್ರವೇಶ ದ್ವಾರ, ‌ಉದ್ಘಾಟನೆ

7) ಹೊಸದಾಗಿ ಝೂ ಶಾಪ್ ಪ್ರಾರಂಭ

 8) ಸುವರ್ಣಮುಖಿ ಕೆಫೆಗೆ ಚಾಲನೆ

9) ಅರಣ್ಯ ಸಿಬ್ಬಂದಿಗಳ ವಸತಿಗೃಹಗಳ‌ ಉದ್ಘಾಟನೆ

10) ವಿವಿಧ ಪ್ರಾಣಿ-ಪಕ್ಷಿಗಳ (ತೋಳಗಳ ಆವರಣ, ಚೀತಾ ಆವರಣ, ಎಮು ಮತ್ತು ರಿಯಾ ಪಕ್ಷಿಗಳ ಆವರಣ ಹಾಗೂ ಫೆಸೆಂಟ್ ಪಕ್ಷಿ) ಆವರಣಗಳ ಉದ್ಘಾಟನೆ*. 

11)ಇದೇ ಸಂದರ್ಭದಲ್ಲಿ,  ಹಿಪ್ಪೋಪೊಟಮಸ್ ಚಿಕಿತ್ಸಾ ಸಮಯದಲ್ಲಿ ಶಿವಮೊಗ್ಗದಲ್ಲಿ ಸಾವಿಗೀಡಾದ ಡಾ.ಸಮೀಕ್ಷ ಪಶುವೈದ್ಯಾಧಿಕಾರಿ ರವರ ನೆನಪಿನಲ್ಲಿ , ಹಿಪ್ಪೋಪೊಟಮಸ್ ಬ್ಲಾಕ್ ಗೆ ಮತ್ತು  ಮರಿ ಹಿಪ್ಪೋಪೊಟಮಸ್ ಗೆ “ಸಮೀಕ್ಷ” ಎಂದು ನಾಮಕರಣ ಮಾಡಲು ಮಾನ್ಯ ಸಚಿವರು ಸೂಚನೆ‌ ನೀಡಿದರು.

12) ಸಫಾರಿ ಪ್ರದೇಶಕ್ಕೆ ಭೇಟಿ ನೀಡಿ, ಆನೆಗಳ ಆರೋಗ್ಯ, ಆರೈಕೆ, ಕಲ್ಯಾಣ ಹಾಗೂ ನಿರ್ವಹಣೆಗೆ ಮೀಸಲಾಗಿರುವ “ಸುವರ್ಣ ಆನೆ ಆರೈಕೆ ಕೇಂದ್ರ”ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿದರು. 

13) ಸಫಾರಿ ವೀಕ್ಷಣೆಯ ಮೂಲಕ ಜೈವಿಕ ಉದ್ಯಾನವನದಲ್ಲಿ ಕೈಗೊಳ್ಳಲಾಗುತ್ತಿರುವ ವನ್ಯಜೀವಿ ಸಂರಕ್ಷಣೆ ಹಾಗೂ ನಿರ್ವಹಣಾ ಚಟುವಟಿಕೆಗಳನ್ನು ವೀಕ್ಷಣೆ

ಕಾರ್ಯಕ್ರಮದಲ್ಲಿ ಬಿ.ಶಿವಣ್ಣ, ಶಾಸಕರು, ಎಂ. ಕೃಷ್ಣಪ್ಪ, ಮಾನ್ಯ ಶಾಸಕರು, ರವಿ ಬಿ. ಪಿ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು  ಅರಣ್ಯ ಪಡೆ ಮುಖ್ಯಸ್ಥರು, ಇತರೆ ಪ್ರಮುಖ ಅರಣ್ಯಾಧಿಕಾರಿಗಳು  ಉಪಸ್ಥಿತರಿದ್ದರು.


Share It

You cannot copy content of this page