ಸುದ್ದಿ

ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜಕ್ಕಸಂದ್ರದ ಆಟದ ಮೈದಾನ ಮತ್ತು ಉದ್ಯಾನವನಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

Share It

ಬೆಂಗಳೂರು: ಜಕ್ಕಸಂದ್ರ ವಾರ್ಡ್‌ನ 14ನೇ ಮುಖ್ಯರಸ್ತೆಯಲ್ಲಿ (ಅಗರ ಕೆರೆ ಎದುರಿನ ಇಂದಿರಾ ಕ್ಯಾಂಟೀನ್ ಬಳಿ) ನೂತನವಾಗಿ ಅಭಿವೃದ್ಧಿಪಡಿಸಲಾದ ಜಕ್ಕಸಂದ್ರ ಉದ್ಯಾನವನ ಮತ್ತು ಆಟದ ಮೈದಾನಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉದ್ಯಾನವನ 1ರಲ್ಲಿ ಮಕ್ಕಳ ಆಟದ ಸಲಕರಣೆಗಳು ಮತ್ತು ಕ್ರಿಕೆಟ್ ಮೈದಾನ,ಉದ್ಯಾನವನ 2ರಲ್ಲಿ ವಹ್ನಿಕುಲ ಕ್ಷತ್ರಿಯ ಆಚರಣೆಗಳ ಕಲ್ಯಾಣಿ, ಉದ್ಯಾನವನ-3ರಲ್ಲಿ ನಡಿಗೆ ಮಾರ್ಗ ಮತ್ತು ಬೆಂಚುಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ.

ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ಮುರಗೇಶ್ ಮೊದಲಿಯಾರ್, ಜಿ ಮಂಜುನಾಥ್, ವಾರ್ಡ್ ಅಧ್ಯಕ್ಷ ಗಣೇಶ್, ವೆಂಕಟಾಪುರ ಮತ್ತು ಜಕ್ಕಸಂದ್ರ ನಿವಾಸಿಗಳು ಉಪಸ್ಥಿತರಿದ್ದರು.


Share It

You cannot copy content of this page