ಬೆಂಗಳೂರು: ಜ್ಯೋತಿಷ್ಯ, ಭವಿಷ್ಯವನ್ನು ಹೆಚ್ಚಾಗಿ ನಂಬುವ ಮಾಜಿ ಸಚಿವ ಎಚ್.ಡಿ.ರೇವಣ್ಣರೇವಣ್ಣ ಅವರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಹೊತ್ತಿರುವ ರೇವನ್ಣ ಅವರ ಜಾಮೀನು ಅರ್ಜಿ ವಿಚಾರಣೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇಂದು ಜಾಮೀನು ಸಿಗಲಿದೆಯಾ ಅಥವಾ ಮತ್ತೇ ಜೈಲು ಪಾಲಾಗುವ ಸಾಧ್ಯತೆಯಿದೆಯಾ ಎಂಬ ಬಗ್ಗೆ ಕುತೂಹಲ ಮೂಡಿದೆ.
ವಿಶೇಷ ನ್ಯಾಯಾಲಯದಲ್ಲಿ ಈಗಾಗಲೇ ಒಮ್ಮೆ ಜಾಮೀನು ಪಡೆದುಕೊಂಡಿದ್ದ ರೇವಣ್ಣ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆಯಲೇಬೇಕಿದೆ. ಇದರಲ್ಲಿ ತಾತ್ಕಾಲಿಕ ಜಾಮೀನು ನೀಡಿರುವ ನ್ಯಾಯಾಲಯ ಸೋಮವಾರಕ್ಕೆ ವಿಚಾರಣೆ ಮುಂದುವರಿಸಿತ್ತು.
ನ್ಯಾಯಾಲಯ ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡರೆ, ರೇವಣ್ಣಗೆ ರಿಲೀಫ್ ಸಿಗಲಿದ್ದು, ಒಂದು ವೇಳೆ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ತಿರಸ್ಕರಿಸಿದರೆ, ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಹೀಗಾಗಿ, ರೇವಣ್ಣ ಜಾಮೀನು ಸಿಗುವಂತೆ ಅನೇಕ ದೇವರುಗಳ ಮೊರೆ ಹೋಗಿದ್ದಾರೆ.
ರೇವಣ್ಣ ಪರ ವಕೀಲರು, ಪ್ರಜ್ವಲ್ ಪ್ರಕರಣದಲ್ಲಿರುವಂತಹ ಸೆಕ್ಷನ್‌ಗಳು ರೇವಣ್ಣ ಅವರ ಮೇಲಿಲ್ಲ. ರೇವಣ್ಣ ಅವರು ವಿಚಾರಣೆ ತಪ್ಪಿಕೊಂಡು ಹೋಗುವಂತಹ ಯಾವುದೇ ಸಾಧ್ಯತೆಗಳಿಲ್ಲ. ಹೀಗಾಗಿ, ಅವರಿಗೆ ಜಾಮೀನು ನೀಡಬೇಕು ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಲಿದ್ದಾರೆ.
ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಜಾಮೀನು ರಹಿತ ಸೆಕ್ಷನ್ ಇದ್ದು, ಮ್ಯಾಜಿಸ್ಟೆçÃಟ್ ಕೋರ್ಟ್ಗೆ ಜಾಮೀನು ನೀಡುವ ಅಧಿಕಾರವಿಲ್ಲ ಎಂದು ಎಸ್‌ಐಟಿ ವಕೀಲರ ವಾದ ಮಂಡನೆ ಮಾಡಲಿದ್ದು, ನ್ಯಾಯಾಲಯ ಯಾರ ವಾದವನ್ನು ಪುರಸ್ಕರಿಸಲಿದೆ ಕಾದು ನೋಡಬೇಕಿದೆ.