ಮೈಸೂರು: ಎಸ್ ಐಟಿ ಮುಂದೆ ಬಂದು ಶರಣಾಗಿ ತನಿಖೆಗೆ ಸಹಕರಿಸುವಂತೆ ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡರ ಪತ್ರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್‌ನನ್ನು ವಿದೇಶಕ್ಕೆ ಕಳಿಸಿದ್ದೆ ದೇವೇಗೌಡ್ರು ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರಜ್ವಲ್ ರೇವಣ್ಣ ಎಲ್ಲಿದ್ರೂ ದೇಶಕ್ಕೆ ಬರಲೇಬೇಕು, ಪ್ರಧಾನಿಗೆ ಪತ್ರ ಬರೆದು ಆತನ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಳಿದ್ದೇವೆ. ಇದಕ್ಕೆ ಮೋದಿ ಅವ್ರು ಹೇಗೆ ಪ್ರತಿಕ್ರಿಸಿಸುತ್ತಾರೆ ಕಾದು ನೋಡಬೇಕು ಎಂದಿದ್ದಾರೆ.
ಈ ನಡುವೆ ದೇವೇಗೌಡರು, ಪ್ರಜ್ವಲ್ ಅವರಿಗೆ ಪತ್ರವೊಂದನ್ನು ಬರೆದು, ಟ್ವೀಟರ್ ಮೂಲಕ ಪೋಸ್ಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ನಾಟಕ ಮಾಡುವುದನ್ನು ಬಿಟ್ಟು, ಆತನನ್ನು ಕರೆಸಿ, ತನಿಖೆಗೆ ಹಾಜರಾಗುವಂತೆ ಹೇಳಲಿ ಎಂದು ಕುಟುಕಿದ್ದಾರೆ.
ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಹೋಗುವಂತೆ ಹೇಳಿದ್ದೆ ದೇವೇಗೌಡ್ರು, ಆತನ ಮೇಲೆ ಆರೋಪ ಬರುತ್ತಿದ್ದಂತೆ ಆತನನ್ನು ವಿದೇಶಕ್ಕೆ ಕಳಿಸಿ, ಮೋದಿ ಅವರ ಜತೆ ಮಾತನಾಡಿ, ಆರೆಸ್ಟ್ ಮಾಡಲು ಆಗದಂತೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ರು, ಈಗ ಕಾನೂನು ಬಿಗಿಯಾಗುತ್ತಿದ್ದಂತೆ ನಾಟಕ ಮಾಡ್ತಿದ್ದಾರೆ. ನಾವು ನೊಂದವರಿಗೆ ನ್ಯಾಯ ಕೊಡ್ಸೋ ಕಡೆಗಷ್ಟೇ ಗಮ್ನ ಕೊಡ್ತೀವಿ ಎಂದು ತಿಳಿಸಿದ್ದಾರೆ.