ಬೆಂಗಳೂರು; ಪರಿಷತ್ ಟಿಕೆಟ್ ವಿಚಾರವಾಗಿ ಸಿಎಂ ಸಿದ್ದಾರಾಮಯ್ಯ–ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇವಲ ಸಿಎಂ ಡಿಸಿಎಂ ಚರ್ಚೆ ಮಾಡಿದರೆ ಸೂಕ್ತವಲ್ಲ, ಪಕ್ಷದಲ್ಲಿ ಹಿರಿಯ ನಾಯಕರು ಇದ್ದಾರೆ. ಅವರ ಅನಿಸಿಕೆ ಅಭಿಪ್ರಾಯನೂ ಮುಖ್ಯ. ಏಕಾಏಕಿ ತಾವ್ ತಾವೇ ಚರ್ಚೆ ಮಾಡಿದರೆ ಒಳ್ಳೆಯದಲ್ಲ, ನಮ್ಮನ್ನು ಪರಿಗಣಿಸಿ ಅನಿಸಿಕೆ ಅಭಿಪ್ರಾಯ ತೆಗೆದುಕೊಳ್ಳಬೇಕು. ಯಾವ ಸಮುದಾಯ ಪಕ್ಷದ ಪರವಾಗಿದೆ ಎಂಬುದನ್ನು ತಿಳ್ಕೊಂಡು ಟಿಕೆಟ್ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಪರಂ ಏನಂದ್ರು?: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬದಲಾವಣೆ ಮಾಡುವ ಎಲ್ಲಾ ಹಕ್ಕು ಹೈಕಮಾಂಡ್‌ಗೆ ಇದೆ. ಶಿವುಕುಮಾರ್‌ನ ಬದಲಾವಣೆ ಮಾಡ್ಬೇಕು ಅಂದ್ರೆ ಬದಲಾಯಿಸ್ತಾರೆ. ಬದಲಾವಣೆ ನನ್ನ ಕೈಯಲ್ಲಿ ಸಿಎಂ-ಡಿಸಿಎಂ ಕೈಯಲ್ಲೂ ಇಲ್ಲ, ಎಲ್ಲಾ ಹೈಕಮಾಂಡ್‌ನ ಕೈಯಲ್ಲಿದೆ ಎಂದರು.
