ಐಪಿಎಲ್-೨೦೨೪ ಆವೃತ್ತಿ ಮುಗಿದಿದ್ದರು ಸಹ, ಯುವ ಸ್ಟಾರ್ ಆಟಗಾರರು ಒಂದಲ್ಲ ಒಂದು ಸುದ್ದಿಯಿಂದ ಸಖತ್ ವೈರಲ್ ಆಗುತ್ತಿದ್ದಾರೆ. ರಾಜಸ್ತಾನ್ ರಾಯಲ್ಸ್ ತಂಡದ ಯುವ ಸ್ಟಾರ್ ಆಟಗಾರ ರಿಯಾನ್ ಪರಾಗ್ ಅವರಿಗೆ ಈ ಬಾರಿ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ಆದರೆ ರಿಯಾನ್ ಪರಾಗ್ ಕೆಲವು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಪರಾಗ್ ತನ್ನ ಯೂಟ್ಯೂಬ್ ಖಾತೆಯಲ್ಲಿ ಬಾಲಿವುಡ್ನ ಸ್ಟಾರ್ ನಟಿಯರ ಹಾಟ್ ವಿಡಿಯೋ ಸರ್ಚ್ ಮಾಡಿರುವುದು ಸಖತ್ ವೈರಲ್ ಆಗಿದೆ. ನಟಿಯರಾದ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋಗಳನ್ನು ರಿಯಾನ್ ಪರಾಗ್ ಸರ್ಚ್ ಮಾಡಿರುವುದು ಬಹಿರಂಗಗೊoಡಿದೆ.

ಕೆಲವು ದಿನಗಳಿಂದೆ ರಿಯಾನ್ ಪರಾಗ್ ತಮ್ಮ ಮೊಬೈಲ್ ಮೂಲಕ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಬಂದಿದ್ದರು, ಇದೆ ವೇಳೆ ಯೂಟ್ಯೂಬ್ ಸರ್ಚ್ನಲ್ಲಿ ನಟಿಯರಾದ ಅನನ್ಯಾ ಪಾಂಡೆ ಹಾಗೂ ಸಾರಾ ಅಲಿ ಖಾನ್ ಅವರ ಹಾಟ್ ವಿಡಿಯೋ ಎಂದು ಸರ್ಚ್ ಮಾಡಿರುವುದು ಕಂಡು ಬಂದಿತ್ತು. ಆದರೆ ಈ ಸರ್ಚ್ ಹಿಸ್ಟರ್‌ಯನ್ನು ಡಿಲೀಟ್ ಮಾಡದೇ ರಿಯಾನ್ ಪರಾಗ್ ಲೈವ್ ಸ್ಟ್ರೀಮಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿಯರ ಹೆಸರುಗಳೊಂದಿಗೆ ಹಾಟ್ ವಿಡಿಯೋ ಸರ್ಚ್ ಮಾಡಿರುವುದು ಕಂಡು ಬಂದಿತ್ತು.

ರಿಯಾನ್ ಪರಾಗ್ ಅವರ ಯೂಟ್ಯೂಬ್ ಸರ್ಚ್ ಹಿಸ್ಟರಿ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದ ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲಾರಂಭಿಸಿದ್ದಾರೆ.
ಇದರ ಮಧ್ಯೆ ರಿಯಾನ್ ಪರಾಗ್‌ಗೆ ಟಿ-20 ವಿಶ್ವಕಪ್‌ಗೆ ಆಯ್ಕೆಯಾಗದಿರುವ ಬೇಸರವು ಇದೆ, ಈಗ ಇದೂಂದು
ಹಾಟ್ ನ್ಯೂಸ್ ತುಂಬಾ ಮುಜುಗರಕ್ಕೀಡು ಮಾಡಿರುವುದಂತು ನಿಜ.
