ಸಾಮಾನ್ಯವಾಗಿ ಬಾಳೆಹಣ್ಣು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಊಟ ಆದ ಮೇಲೆ ಅಥವಾ ಊಟಕ್ಕಿಂತ ಮುಂಚೆ ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಇದ್ದೆ ಇರುತ್ತದೆ, ಬಾಳೆಹಣ್ಣಿನಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಕೆಂಪು ಬಾಳೆಹಣ್ಣು ಕೂಡ ಒಂದು. ಇದು ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಅಂಶಗಳ ಜೊತೆಗೆ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.

ಮುಖ್ಯವಾಗಿ ಕೆಂಪು ಬಾಳೆಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಹಾಗಾದರೆ ಇದನ್ನು ಪ್ರತಿದಿನ ತಿನ್ನುವುದರಿಂದ ಆಗುವ ಪ್ರಯೋಜನಗಳು ಏನು?

ಕೆಂಪು ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನೆಗಳು:-
*ಪೋಷಕಾಂಶಗಳ ವೃದ್ಧಿ:-
ಹಳದಿ ಬಾಳೆಹಣ್ಣಿನಂತೆಯೇ ಕೆಂಪು ಬಾಳೆ ಅಗತ್ಯವಾದ ಜೀವಸತ್ವಗಳು ಮತ್ತು ವಿಟಮಿನ್ ಸಿ, ವಿಟಮಿನ್ ಬಿ ೬, ಪೊಟ್ಯಾಸಿಯಮ್ ಮತ್ತು ಫೈಬರ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಈ ಪೋಷಕಾಂಶಗಳು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮುಖ್ಯವಾಗಿದೆ.
*ಹೃದಯದ ರಕ್ಷಣೆ:-
ಕೆಂಪು ಬಾಳೆ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಕ್ತದೊತ್ತಡ ಮತ್ತು ಹೃದಯದ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು ಬಾಳೆಹಣ್ಣುಗಳಂತಹ ಪೊಟ್ಯಾಸಿಯಮ್ ಭರಿತ ಹಣ್ಣುಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ;-
ಕೆಂಪು ಬಾಳೆಹಣ್ಣು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆAಟ್‌ಗಳು ದೇಹದಲ್ಲಿನ ಹಾನಿಕಾರಕ ಜೀವಕೋಶಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯವನ್ನು ಬೆಂಬಲಿಸುತ್ತದೆ.

