ಅಪರಾಧ ಫ್ಯಾಷನ್ ಸಿನಿಮಾ ಸುದ್ದಿ

ನಟ ಬಾಲಯ್ಯನ ಸುತ್ತ ‘ಕಾಂಟ್ರವರ್ಸಿ’ಗಳ ಹುತ್ತ

Share It

ಬೆಂಗಳೂರು: ನಂದಮೂರಿ ಬಾಲಕೃಷ್ಣ , NBK ಅಥವಾ ಬಾಲಯ್ಯ ಅಂತಾನೆ ಹೆಸರುವಾಸಿಯಾಗಿರುವ ತೆಲುಗಿನ ಸೂಪರ್ ಸ್ಟಾರ್, ತಮ್ಮ ಸೂಪರ್ ಡೂಪರ್ ಸಿನಿಮಾಗಳಿಂದಲೇ ಹೆಸರನ್ನು ಮಾಡಿರುವಂತ ನಟ ಬಾಲಯ್ಯ.

ತಮ್ಮ 63ನೇ ವಯಸ್ಸಲ್ಲೂ ಕೂಡ ಸೂಪರ್ ಡೂಪರ್ ಚಿತ್ರಗಳನ್ನು ಕೊಡ್ತಾ, ತಮ್ಮ ಚಿತ್ರಗಳಲ್ಲಿ ತಾವೇ ನಾಯಕನಟನಾಗಿ ಮಿಂಚುವ ನಟ ಬಾಲಯ್ಯ. ತಮ್ಮ ಸಿನಿಮಾಗಳಿಂದ ಎಷ್ಟು ಫೆಮಸ್ಸೊ, ಅಷ್ಟೇ ಪೊಲಿಟಿಕಲ್ ಕರಿಯರ್‌ನಿಂದಾನು ಫೇಮಸ್ಸು.

TDP ಪಕ್ಷ ಇಂದುಪುರ ಕ್ಷೇತ್ರದಿಂದ MLA ಆಗಿರುವಂತ ಬಾಲಯ್ಯ ಕಾಂಟ್ರವರ್ಸಿಗಳಿಂದನು ಅಷ್ಸೇ ಫೇಮಸ್. ಈಗ ಮತ್ತೊಂದು ಕಾಂಟ್ರವರ್ಸಿಗೆ ಬಾಲಯ್ಯ ಸಿಕ್ಕಿಹಾಕಿಕೊಂಡಿದ್ದಾರೆ.

ಇತ್ತೀಚ್ಚಿಗೆ ಬಾಲಯ್ಯ ಅವರು “ಗ್ಯಾಂಗ್ಸ್ ಆಫ್ ಗೋದಾವರಿ” ಎಂಬ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಕಾರ್ಯಕ್ರಮದ ಕೊನೆಯಲ್ಲಿ ಪೋಟೋ ಸೆಷನ್ ನಡೆಯುವ ಸಂಧರ್ಭದಲ್ಲಿ, ತೆಲುಗು ಹಾಗೂ ತಮಿಳಿನ ಖ್ಯಾತ ನಟಿ ಅಂಜಲಿಯನ್ನ ಹಿಂದಕ್ಕೆ ತಳ್ಳಿದ್ದ ವೀಡಿಯೋ ವೈರಲ್ ಆಗಿದ್ದು, ಈಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದ ನೆಟ್ಟಿಗರು, ಚಿತ್ರ ವಿಮರ್ಶಕರು, ಅಭಿಮಾನಿಗಳು, ಈ ರೀತಿಯ
ವರ್ತನೆ ಸರಿಯಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಬಾಲಯ್ಯನವರು ಈ ಹಿಂದೆ ಸಹ 2004ರಲ್ಲಿ ಒಂದು ಮರ್ಡರ್ ಕೇಸ್‌ನಲ್ಲಿ ತಮ್ಮ ಹೆಸರು ಕೇಳಿ ಬಂದಿತ್ತು.ನಂತರ 2017ರಲ್ಲಿ ಅಭಿಮಾನಿಯೊಬ್ಬರು ಸೆಲ್ಪಿ ತೆಗೆದುಕೊಳ್ಳಲು ಬಂದಾಗ ಕಪಾಳಮೋಕ್ಷ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ತಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ ಅನುಮಾನಾಸ್ಪದ ರೀತಿಯಲ್ಲಿ
ಕೊಲೆಯಾಗಿ ಮೃತದೇಹ ಮನೆಯ ಲ್ಯಾನ್‌ನಲ್ಲಿ ಪತ್ತೆಯಾಗಿತ್ತು.

ಚಿತ್ರೀಕರಣದ ಸಂಧರ್ಭದಲ್ಲಿ ಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾಗ ಒಬ್ಬ ನರ್ಸ್ ಮುಂದೆ ಮಹಿಳೆಯರಿಗೆ ಅವಹೇಳನ ಆಗುವ ರೀತಿಯಲ್ಲಿ ಮಾತನಾಡಿದ್ದರಂತೆ. ಈಗೆ ಹಲವು ರೀತಿಯ ವಿವಾದಗಳನ್ನು ಬಾಲಯ್ಯ ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.


Share It

You cannot copy content of this page