ಬೆಂಗಳೂರು: ನಾವೆಲ್ಲ ವಾಟರ್ ಫಾಲ್ಸ್ ನೋಡಬೇಕು ಅಂದ್ರೆ ಮಲೆನಾಡನ್ನು ಹುಡುಕಿಕೊಂಡು ಹೋಗ್ತೀವಿ, ಆದ್ರೆ ಈ ಚೀನಾದವ್ರು ನೋಡ್ರಿ, ತಮಗೆ ಬೇಕಿದ್ದ ಕಡೆಯೇ ವಾಟರ್ ಫಾಲ್ಸ್ ಸೃಷ್ಟಿ ಮಾಡ್ಕೊಂಡ್ ಬಿಡ್ತಾರೆ
ಹೌದು, ನಾವೆಲ್ಲ ಚೀನಾ ವಸ್ತುಗಳು ಹೆಚ್ಚಿನ ದಿನ ಬಾಳಿಕೆ ಬರಲ್ಲಾ ಅಂತ, ಅವ್ರುನ್ನ ಹೀಯಾಳಿಸಿಕೊಂಡೇ ಬದುಕ್ತಿದ್ದೇವೆ. ಆದರೆ, ಅವರು ಕಟ್ಟೋ ಸೇತುವೆಗಳು, ಡ್ಯಾಂಗಳು, ಬಿಲ್ಡಿಂಗ್‌ಗಳು ಇಡೀ ಜಗತ್ತನ್ನೇ ಬೆರುಗುಗೊಳಿಸುತ್ತವೆ. ಆದ್ರೆ, ಅವ್ರು ಇಂಡಿಯಾಗೆ ಕೊಡೋ ವಸ್ತುಗಳು ಮಾತ್ರವೇ ವಾರಂಟಿ ಇಲ್ಲದ್ದು ಅನ್ನಿಸುತ್ತೆ.
ಇಷ್ಟಲ್ಲ ಪೀಠಿಕೆ ಯಾಕಪ್ಪ ಅಂದ್ರೆ, 360 ಅಡಿಯ ಬಿಲ್ಡಿಂಗ್‌ವೊಂದು ಚೀನಾದ ಗುಯಾಂಗ್ ಸಿಟಿಯಲ್ಲಿದೆ. ಈ ಬಿಲ್ಡಿಂಗ್‌ನಲ್ಲಿ ತಳಮಹಡಿಯಲ್ಲಿ ನೀರು ಸಂಗ್ರಹಕ್ಕೆ ಟ್ಯಾಂಕ್‌ವೊಂದನ್ನು ನಿರ್ಮಿಸಲಾಗಿದೆ. ಈ ಟ್ಯಾಂಕ್‌ನಿಂದ 185 ಕಿಲೋವ್ಯಾಟ್‌ನ ನಾಲ್ಕು ಪಂಪ್‌ಗಳನ್ನು ಬಳಸಿ, ನೀರನ್ನು ಮೇಲಕ್ಕೆ ಎತ್ತಲಾಗುತ್ತದೆ.
320 ಅಡಿಗೂ ಮೇಲಿನವರೆಗೆ ನೀರನ್ನು ಎತ್ತಿ, ಅಲ್ಲಿಂದ ಪಂಪ್ ಮಾಡಲಾಗುತ್ತದೆ. ಆ ನೀರು ಬೀಳುವ ರಭಸ, ಶೈಲಿ ಎಲ್ಲವೂ ಒಂದು ಜಲಪಾತದಂತೆ ಭಾಸವಾಗುತ್ತದೆ. ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಛಯ ಮತ್ತು ಕಚೇರಿಗಳನ್ನು ಹೊಂದಿರುವ ಈ ಬಿಲ್ಡಿಂಗ್‌ನಲ್ಲಿ ಈ ಜಲಪಾತ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಬಿಲ್ಡಿಂಗ್ ಕೆಳಗೆ ನಿಂತು, ಮಕ್ಕಳು, ವಯಸ್ಕರು ಎಲ್ಲರೂ ನೀರಿನ ರಭಸ ಮತ್ತು ಜಲಪಾತದ ಸೌಂದರ್ಯವನ್ನು ತಾವಿದ್ದಲಿಂದಲೇ ನೋಡಿ ಎಂಜಾಯ್ ಮಾಡ್ತಾರೆ. ಕೆಲಸಗಾರರು ತಮ್ಮ ಕೆಲಸದ ಒತ್ತಡವನ್ನು ಜಲಪಾತದಡಿ ಬಂದು ನಿಂತು ನೀಗಿಕೊಳ್ತಾರೆ. ಮರಳಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ತಾರೆ.
ಹೀಗೆ, ಕಸದಿಂದ ರಸ ಎಂಬಂತೆ ಇದ್ದಲ್ಲಿಯೇ ಸ್ವರ್ಗ ಸೃಷ್ಟಿ ಮಾಡಿಕೊಳ್ಳೋದರಲ್ಲಿ ಚೀನಿಯರು ಎತ್ತಿದ ಕೈ. ನಾವು ಜಲಪಾತ, ನಿಸರ್ಗ ನೋಡಬೇಕು ಎಂದರೆ, ವರ್ಷಗಟ್ಟಲೇ ಫ್ಲಾನ್ ಮಾಡಿ, ವಾರಗಟ್ಟಲೇ ಸಿದ್ಧತೆ ಮಾಡಿಕೊಂಡು, ಪ್ರಾವಸಕ್ಕೆ ಹೋಗಿ ವಾಪಸ್ ಬರುವಾಗ ಜೋಲು ಮೋರೆ ಹಾಕಿಕೊಂಡು ಬರುತ್ತೇವೆ. ನಾವಿದ್ದಲ್ಲಿಯೇ ಸ್ವರ್ಗ ಸೃಷ್ಟಿ ಮಾಡಿಕೊಂಡರೆ ಬೆಸ್ಟ್ ಅಲ್ಲವೇ?