ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ತಲುಪಬೇಕು; ಬಿಜಾಯಿಕುಮಾರ್
ಸೂಲಿಬೆಲೆ; ಇಂದಿನ ದುಬಾರಿ ಆರೋಗ್ಯ ಸೇವೆಗಳ ಆರ್ಭಟದಲ್ಲಿ ಜನಸಾಮಾನ್ಯರಿಗೆ ಉಚಿತ ಸೇವೆಗಳು ಮರಿಚಿಕೆಯಾಗಿದ್ದು ಸರ್ಕಾರ ಮತ್ತು ಖಾಸಗಿಯಾಗಿ ಸಮಾಜದ ಕಟ್ಟ ಕಡೇಯ ಪ್ರಜೆಗಳಿಗೆ ಉಚಿತ ಆರೋಗ್ಯ ಸೇವೆಗಳನ್ನು ತಲುಪಿಸಬೇಕು ಎಂದು ಅಗ್ನ್ಸೋಬೆಲ್ ಕಂಪನಿಯ ಬಿಜಾಯಿಕುಮಾರ್ ಸಾಹು ಅಭಿಪ್ರಾಯಪಟ್ಟರು.
ಹೊಸಕೋಟೆ ತಾಲ್ಳೂಕಿನ ಜಡಿಗೇನಹಳ್ಳಿ ಹೋಬಳಿ ದಬ್ಬಗುಂಟೆ ಗ್ರಾಮದಲ್ಲಿ ಅಗ್ನ್ಸೋಬೆಲ್ ಕಂಪನಿ ಹಾಗೂ ಟೆಲಿರೆಡ್ ಪೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯ ಅನುದಾನದಲ್ಲಿ ಹೊಸಕೋಟೆ ತಾಲ್ಲೂಕಿನ 4 ಗ್ರಾಮಗಳಲ್ಲಿ ಸೇವೆ ನೆಡೆಯುತ್ತಿದ್ದು ಇದು 5ನೇ ಕೇಂದ್ರವಾಗಿದೆ ಎಂದರು.
ಹೆಚ್.ಆರ್.ಮ್ಯಾನೇಜರ್ ಪ್ರೀತಿಷಾ ಮಾತನಾಡಿ 5ನೇ ಕೇಂದ್ರದ ವ್ಯಾಪ್ತಿಯಲ್ಲಿ ದಬ್ಬಗುಂಟೆ ಗ್ರಾಮ, ಚಿಕ್ಕನಲ್ಲಾಲ, ಹಲಸಿನಕಾಯಿಪುರ ಸೇರಿದಂತೆ ಸುಮಾರು 300 ಕುಟುಂಬಗಳಿದ್ದು ಸುಮಾರು 1200 ಕ್ಕೂ ಹೆಚ್ಚು ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಪ್ರಸ್ತುತ ಹೊಸಕೋಟೆ ತಾಲ್ಲೂಕಿನ ಬೇಗೂರು, ಸಿಟಿ ಗೊಲ್ಲಹಳ್ಳಿ, ಕುಂಬಳಹಳ್ಳಿ, ಕಾರಹಳ್ಳೀಯಶವಂತಪುರ ಗ್ರಾಮಗಳಲ್ಲಿ4 ಆರೋಗ್ಯ ಕೇಂದ್ರಗಳು ಸೇವೆ ಸಲ್ಲಿಸಿದ್ದು ಇದು 5ನೇ ಕೇಂದ್ರವಾಗಿ ಲೋಕಾರ್ಪಣೆ ಮಾಢಿದ್ದೇವೆ ಎಂದರು.
ಅಗ್ನ್ಸೋಬೆಲ್ ಕಂಪನಿಯ ಪ್ಲಾಂಟ್ ಇಂಜಿನಿಯರ್ ಸಾಹಿಲ್ ಕುಮಾರ್ ಪಾಂಡೇ, ಹೆಚ್.ಆರ್. ಮ್ಯಾನೇಜರ್ ಡಾ.ಪ್ರೀತಿಷಾ, ಸೀನಿಯರ್ ಅಪರೇಷನ್ ಮ್ಯಾನೇಜರ್ ಸುಮಾ, ಚೀಪ್ ಇನ್ಪಾಕ್ಟ್ ಅಪೀಸರ್ ಆಶ್ವಿನ್ ಸಿನ್ಹಾ, ಸಬಾ,ಕುಮಾರ್, ಮಹೇಂದ್ರ, ಆನಂದ್ , ಆಶಾ,ಅಂಗನವಾಡಿ ಕಾರ್ಯಕರ್ತೆಯರು ಸಂಸ್ಥೆಯ ಬಿಜಾಯಿಕುಮಾರ್, ಇತರರು ಇದ್ದರು.