ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣನನ್ನು 42 ನೇ ಎಸಿಎಂಎಂ ನ್ಯಾಯಾಲಯ ಏಳು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಲು ಆದೇಶ ನೀಡಿದೆ.
ಮಧ್ಯಾಹ್ನ 1 ಗಂಟೆಯಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಸಂಜೆ 4.15 ಕ್ಕೆ ಆದೇಶ ಪ್ರಕಟಿಸಿದ್ದು, ಎಸ್ಐಟಿ ಕಸ್ಟಡಿಗೆ ನೀಡಲು ಆದೇಶ ನೀಡಿದೆ. ಪ್ರಜ್ವಲ್ ಪರ ವಕೀಲರು ಅವರನ್ನು ಕೇವಲ ಒಂದು ದಿನ ಮಾತ್ರವೇ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿಕೊಂಡಿದ್ದರು.
ಮೀಡಿಯಾ ಟ್ರಯಲ್ಗೆ ರೇವಣ್ಣ ಆಕ್ಷೇಪ: ಮೀಡಿಯಾಗಳ ಮುಂದೆ ನ್ಯಾಯಾಲಯದ ವಿಚಾರಣೆ ನಡೆಯುವುದಕ್ಕೆ ಆರೋಪಿ ಪ್ರಜ್ವಲ್ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು. ವಿಚಾರಣೆ ವೇಳೆ ಮಾಧ್ಯಮಗಳು ಸೇರಿ, ನ್ಯಾಯಾಲಯ ಸಭಾಂಗಣದಲ್ಲಿ ನೂರಾರು ಸಂಖ್ಯೆಯ ಜನ ಕಿಕ್ಕಿರಿದು ಸೇರಿದ್ದರು. ಹೀಗಾಗಿ, ಮುಜುಗರಗೊಂಡ ಪ್ರಜ್ವಲ್, ಮಾಧ್ಯಮಗಳ ಮುಂದೆ ಟ್ರಯಲ್ಗೆ ನಿರ್ಬಂಧ ಹಾಕಬೇಕು ಎಂದು ಮನವಿ ಮಾಡಿದರು.
ವಕೀಲರ ಭೇಟಿಗೆ ಅವಕಾಶ: ಎಸ್ಐಟಿ ಕಸ್ಟಡಿಯಲ್ಲಿರುವ ವೇಳೆ ವಕೀಲರು ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗ್ಗೆ 9.30 ರಿಂದ 10.30 ರವರೆಗೆ ಭೇಟಿಯಾಗಿ ಚರ್ಚೆ ನಡೆಸಬಹುದು ಎಂದು ನ್ಯಾಯಾಲಯ ಅನುಮತಿ ನೀಡಿದೆ. ಹಾಗೆಯೇ ವೈದ್ಯಕೀಯ ನೆರವು ಬೇಕಿದ್ದರೆ ನೀಡಬೇಕು ಎಂದು ಸಹ ನ್ಯಾಯಾಲಯ ತಿಳಿಸಿದೆ.
updating…….
