ಉಪಯುಕ್ತ ಸುದ್ದಿ

ಪದವಿ ಪೂರ್ವ ತರಗತಿಗಳು ಇಂದಿನಿಂದ ಆರಂಭ

Share It

ಬೆಂಗಳೂರು: ಇಂದಿನಿಂದ (ಜೂನ್ 1 )ರಿಂದ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ.

ಪಿಯು ನಿರ್ದೇಶನಾಲಯ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಅಕ್ಟೋಬರ್2 ರಿಂದ ಅ.18 ರವರೆಗೆ ದಸರಾ ರಜೆ ನೀಡಬೇಕು, ಅ.19 ರಿಂದ ಮಾರ್ಚ್ 31 ರವರೆಗೆ (2025) ಎರಡನೇ ಅವಧಿಯ ತರಗತಿಗಳು ನಡೆಯಲಿವೆ. ಏ. 1 ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ಪ್ರತಿದಿನ ಬೆಳಗ್ಗೆ 9.30 ರಿಂದ 3.30 ರವರೆಗೆ ಅಥವಾ 10.30 ರಿಂದ 4.30 ರವರೆಗೆ ತರಗತಿಗಳನ್ನು ಸ್ಥಳೀಯ ಅನುಕೂಲಕ್ಕೆ ತಕ್ಕಂತೆ ಕಾಲೇಜು ಪ್ರಾಂಶುಪಾಲರು ನಿರ್ಧಾರ ತೆಗೆದುಕೊಂಡು ನಡೆಸಬಹುದು.

2024-25 ನೇ ಸಆಲಿನ ಪದವಿ ಪೂರ್ವ ಕೋರ್ಸ್ಗಳೀಗೆ ಜೂನ್ 29 ರೊಳಗೆ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅವಕಾಶವಿದ್ದು, ಜೂನ್ 14ರೊಳಗೆ ದಂಡಶುಲ್ಕವಿಲ್ಲದೆ ಪ್ರವೇಶ ಪಡೆಯಬಹುದು. ಶುಲ್ಕಗಳು ಹಿಂದಿನ ವರ್ಷದಂತೆಯೇ ಮುಂದುವರಿಯಲಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಮಾರ್ಗಸೂಚಿಯಂತೆ ಎಲ್ಲ ಕಾಲೇಜುಗಳು ಮೀಸಲಾತಿ ಅನ್ವಯ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಗಳೀಗೆ ಪ್ರವೇಶ ನೀಡಬೇಕು ಎಂದು ಸೂಚಿಸಿದೆ.


Share It

You cannot copy content of this page