ಬೆಂಗಳೂರು: ಕೆ.ಆರ್ ನಗರದ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ನೊಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಭವಾನಿ ರೇವಣ್ಣ ವಶಕ್ಕೆ ಪಡೆಯುವ ಹುಟುಕಾಟಕ್ಕೆ ಎಸ್ಐಟಿ ಮುಂದಾಗಿದೆ.
ಹೊಳೇನರಸೀಪುರದ ರೇವಣ್ಣ ನಿವಾಸಕ್ಕೆ ತೆರಳಿದ್ದ ಎಸ್ಐಟಿ ತಂಡದ ಮುಂದೆ ಭವಾನಿ ರೇವಣ್ಣ, ವಿಚಾರಣೆಗೆ ಹಾಜರಾಗಲಿಲ್ಲ. ವಕೀಲರು ಬಂದು ವಿಚಾರಣೆಗೆ ಹಾಜರಾಗುತ್ತಾರೆ ಎಂದು ಮಾಹಿತಿ ನೀಡಿದ್ದರಾದರೂ, ಭವಾನಿ ವಿಚಾರಣೆಗೆ ಬರಲೇ ಇಲ್ಲ. ಹೀಗಾಗಿ ಸಂಜೆವರೆಗೆ ಕಾಯ್ದ ಎಸ್ಐಟಿ ತಂಡ ಹೊಳೇನರಸೀಪುರದಿಂದ ವಾಪಸ್ಸಾಯ್ತು. ಆದರೆ, ಅವರನ್ನು ವಶಕ್ಕೆ ಪಡೆಯಲೇಬೇಕು ಎಂಬ ಕಾರಣಕ್ಕೆ ಮೈಸೂರಿನ ವಿವಿಧೆಡೆ ಶೋಧ ಕಾರ್ಯ ನಡೆಯಿತು.
ಭವಾನಿ ರೇವಣ್ಣಗಾಗಿ ಶೋಧ ನಡೆಸಿದ ಎಸ್ಐಟಿ ಪೊಲೀಸರು, `ಮೈಸೂರಿನ ಐದು ಕಡೆ ಹುಟುಕಾಟ ನಡೆಸಿದರು. ಭವಾನಿ ರೇವಣ್ಣ ಅವರ ಸಹೋದರನ ಮನೆ, ಸಂಬಂಧಿಕರ ತೋಟದ ಮನೆಯಲ್ಲಿ ಶೋಧ ನಡೆಸಲಾಯಿತು. ರೇವಣ್ಣ ಅವರ ಆಪ್ತ ಗುತ್ತಿಗೆದಾರರೊಬ್ಬರ ಫಾರ್ಮ್ಹೌಸ್ ನಲ್ಲಿಯೂ ಪೊಲೀಸರು ಶೋಧ ನಡೆಸಿದರು.
ಇಡೀ ಮೈಸೂರಿನಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು ಭವಾನಿ ಸಿಗದೆ ಬರಿಗೈಲಿ ವಾಪಸ್ಸಾದರು. ಮತ್ತೇ ನಾಳೆಯೂ ಮೈಸೂರಿನಲ್ಲಿ ಭವಾನಿ ಇರಬಹುದು ಎಂಬ ಅನುಮಾನವಿರುವ ಎಲ್ಲ ಸ್ಥಳಗಳಲ್ಲಿ ಪರಿಶೀಲನೆ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನಿಸಿದರು.

