ರಾಜಕೀಯ ಸುದ್ದಿ

ಬೆಂಗಳೂರಿನಲ್ಲಿ ಮಳೆಹಾನಿಯಾಗದಂತೆ ಮುಂಜಾಗ್ರತ ಕ್ರಮ: ಡಿಸಿಎಂ ಡಿಕೆಶಿ

Share It

ಬೆಂಗಳೂರು;

“ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಯಾವುದೇ ಹಾನಿಯಾಗದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮಗಳಿಗೆ ಭಾನುವಾರ ರಾತ್ರಿ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು;

ಮಳೆ ನೀರಿನಿಂದ ತೊಂದರೆ ಆಗಬಾರದು ರಾಜಕಾಲುವೆಗಳ ನೀರಿನ ಹರಿವಿನ ಪ್ರಮಾಣ ಸೇರಿದಂತೆ ರಸ್ತೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಕಂಟ್ರೋಲ್ ರೂಮ್ ಅವರು ಜಾಗೃತರಾಗಿದ್ದಾರೆ.

ಮಳೆ ಹೆಚ್ಚು ಬೀಳುತ್ತಿದ್ದು ಶಾಸಕಾಂಗ ಸಭೆಗೆ ಬರುವ ಹೊತ್ತಿನಲ್ಲಿ ರಸ್ತೆಯಲ್ಲಿ ಎರಡರಿಂದ ಮೂರು ಅಡಿ ನೀರು ಹರಿಯುತ್ತಿತ್ತು. ಇಂದು ರಾತ್ರಿಯೆಲ್ಲಾ ನಾನು ಸಹ ಪರಿಶೀಲನೆ ನಡೆಸುತ್ತೇನೆ.

ಶಾಸಕಾಂಗ ಸಭೆ ನಡೆಸಿದ ಉದ್ದೇಶದ ಬಗ್ಗೆ ಕೇಳಿದಾಗ “ಜೂ.3 (ಸೋಮವಾರ) ಬೆಳಿಗ್ಗೆ 10 ಗಂಟೆಗೆ ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಇದು ಬಿಟ್ಟು ಬೇರೆ ಯಾವ ವಿಷಯವು ಚರ್ಚೆಯಾಗಿಲ್ಲ” ಎಂದು ಹೇಳಿದರು.


Share It

You cannot copy content of this page