ಬೆಂಗಳೂರು: ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನಿರೀಕ್ಷೆ ಮಾಡಿದಷ್ಟು ಸ್ಥಾನ ಸಿಗುವುದಿಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಈ ಸಭೆಯಲ್ಲಿ ಅನೇಕ ವಿಷಯಗಳ ಚರ್ಚೆ ನಡೆಯಿತು.
ಇಡೀ ದೇಶದಲ್ಲಿ ಮೋದಿ ಅಲೆ ಮತ್ತೊಮ್ಮೆ ಬೀಸಲಿದೆ ಎಂದು ಎಕ್ಸಿಟ್ ಪೋಲ್ ಗಳೆಲ್ಲ ಹೇಳುತ್ತಿವೆ. ರಾಜ್ಯದಲ್ಲಿ ಬಿಜೆಪಿ 18-20 ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿವೆ. ಹೀಗಾದಲ್ಲಿ, ನಮ್ಮ ಗ್ಯಾರಂಟಿಗಳು ಜನರಿಗೆ ಸರಿಯಾಗಿ ಮನವರಿಕೆಯಾಗಿಲ್ಲ ಎಂಬುದೇ ಅರ್ಥ. ಆದರೆ, ಈ ಭವಿಷ್ಯವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು ಎಂದು ಬಹುತೇಕ ಸಚಿಚರು ಪ್ರಶ್ನೆ ಮಾಡಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಎಕ್ಸಿಟ್ ಪೋಲ್ ಕಾಂಗ್ರೆಸ್ ಗೆ ಬಹುಮತ ಕೊಟ್ಟಿರಲಿಲ್ಲ. ಆದರೆ, ಭರ್ಜರಿ ಬಹುಮತ ಬಂತು. ಹೀಗಾಗಿ, ನಮ್ಮ ನಿರೀಕ್ಷೆಯಂತೆಯೇ ಫಲಿತಾಂಶ ಬರಲಿದೆ ತಲೆನಕೆಡಿಸಿಕೊಳ್ಳಬೇಡಿ ಎಂದು ಸಿಎಂ ಮತ್ತು ಡಿಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.
ನಾಗೇಂದ್ರ ರಾಜೀನಾಮೆ ಚರ್ಚೆ: ನಂತರ ಹಿರಿಯ ಸಚಿವರ ಸಭೆ ನಡೆದಿದ್ದು, ಅಲ್ಲಿ ಪ್ರಮುಖವಾಗಿ ವಾಲ್ಮೀಕಿ ನಿಗಮದ ಅವ್ಯವಹಾರದ ಚರ್ಚೆ ನಡೆಯಿತು ಎನ್ನಲಾಗಿದೆ. ನಾಗೇಂದ್ರ ರಾಜೀನಾಮೆ ಪಡೆಯುವ ಕುರಿತು ಸಲಹೆ ಕೇಳಲಾಯಿತು. ಘಟನೆಯಿಂದ ಪಕ್ಷಕ್ಕೆ ಮತ್ತು ಮುಖ್ಯಮಂತ್ರಿ ಅವರ ಇಮೇಜ್ ಗೆ ದಕ್ಕೆಯಾಗುತ್ತಿದೆ. ಹಾಗಂತ ರಾಜೀನಾಮೆ ಪಡೆಯಲೇಬೇಕಿಲ್ಲ. ಅಂತಿಮ ತೀರ್ಮಾನ ನೀವೆ ತೆಗೆದುಕೊಳ್ಳಿ ಎಂದು ಸಿಎಂ ಮತ್ತು ಡಿಸಿಎಂಗೆ ತೀರ್ಮಾನಕ್ಕೆ ಬಿಟ್ಟರು ಎನ್ನಲಾಗಿದೆ.

