ಶಿವಮೊಗ್ಗ : ಇತಿಹಾಸ ಸಂಶೋಧಕ, ಕೈ ಬರಹಗಳ ತಜ್ಞ, ಉತ್ಸಾಹದ 94 ವರ್ಷದ ಡಾ. ಕೆಳದಿ ಗುಂಡಾ ಜೋಯ್ಸ್ ರವರು ಭಾನುವಾರ ಸಂಜೆ ಸ್ವರ್ಗಸ್ಥರಾದರೆಂದು ತಿಳಿದುಬಂದಿದೆ. ಅಂತಿಮ ದರ್ಶನಕ್ಕಾಗಿ ದೇಹವನ್ನು ಅವರ ಪುತ್ರರಾದ ಕೆಳದಿ ಡಾ.ವೆಂಕಟೇಶ್ ಜೋಯ್ಸ್ ರವರ ಸಾಗರದ ಅಣಲೇ ಕೊಪ್ಪ ಬಡಾವಣೆ ಮನೆಯಲ್ಲಿ ಇರಿಸಲಾಗಿದೆ. ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ 10 ಗಂಟೆಗೆ ಸಾಗರದ ಮಾರಿಕಾಂಬ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

