ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಿಮ್ಮಲಾಪುರದ ಗ್ರಾಮದ ಸಂಪರ್ಕ ಸೇತುವೆಯೊಂದು ಕುಸಿದುಬಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಹರಿಯುವ ತೊರೆಯ ಮೇಲೆ ನಿರ್ಮಾಣ ಮಾಡಿರುವ ಸೇತುವೆ, ಮಳೆಯಿಂದ ನೀರಿನ ಪ್ರವಾಹ ಉಂಟಾಗಿ ಮುರಿದುಬಿದ್ದಿದೆ. ಅಧಿಕಾರಿಗಳು ಈವರೆಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರವೇ ಸರಿಪಡಿಸುವಂತೆ ತಾಕೀತು ಮಾಡಿದ್ದಾರೆ.
ಸೇತುವೆ ಮುರಿದುಬಿದ್ದಿರುವ ಪರಿಣಾಮ ಸುಮಾರು 20 ಕ್ಕೂ ಅಧಿಕ ಗ್ರಾಮದ ಜನರು ಸಂಡೂರು ಪಟ್ಟಣ ಸಂಪರ್ಕಕ್ಕೆ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಅವಶೇಷಗಳ ಮೇಲೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಜನರು ನಡೆದುಕೊಂಡು ರಸ್ತೆ ದಾಟುತ್ತಿದ್ದಾರೆ.
ಅಧಿಕಾರಿಗಳು ಶೀಘ್ರವೇ ಬಂದು ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ವಾಹನಗಳ ಓಡಾಟವಂತೂ ಇಲ್ಲವೇ ಇಲ್ಲ ಎಂಬAತಾಗಿದೆ. ಯಾರಿಗಾದರೂ, ಅನಾರೋಗ್ಯ ಉಂಟಾದರೆ, ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಿಗೇನಾದರೂ ತೊಂದರೆಯಾದರೆ, ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಸಾರ್ವಜಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

