ಶಿವಮೊಗ್ಗ : ಜೂನ್ 01 ರಂದು ಭದ್ರಾ ಹೊಳೆ ದಡದಲ್ಲಿರುವ ಮರದ ಕೆಳಗೆ ಸುಮಾರು 45-50 ವರ್ಷದ ವ್ಯಕ್ತಿ ಮಲಗಿದಲ್ಲೆ ಮೃತ ಪಟ್ಟಿದ್ದು, ಈ ವ್ಯಕ್ತಿಯ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಈ ವ್ಯಕ್ತಿ ಚಹರೆ ಸುಮಾರು 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು ಇಂಚು ಉದ್ದದ ಕಪ್ಪು ಕೂದಲು, ಕರುಚಲು ಗಡ್ಡ ಇರುತ್ತದೆ. ಮೈಮೇಲೆ ಪಿಂಕ್ ಹಾಗೂ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಬೂದು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಬನಿಯನ್ ಧರಿಸಿರುತ್ತಾನೆ.
ಈ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

