ಅಪರಾಧ ಸುದ್ದಿ

ಅನೈತಿಕ ಸಂಬಂಧ, ವಿವಾಹಿತೆಗೆ ಮಾರಕಾಸ್ತ್ರಗಳಿಂದ ಹಲ್ಲೆ

Share It

ಶಿವಮೊಗ್ಗ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಗೆ ವ್ಯಕ್ತಿಯೋರ್ವ ಆಯುಧದಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಹೊರವಲಯವಾದ ವಡ್ಡಿನಕೊಪ್ಪ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ವ್ಯಕ್ತಿಯ ವಿರುದ್ಧ 307 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಸವಿತಾ (35) ಎನ್ನುವ ವಿವಾಹಿತ ಮಹಿಳೆಯ ಮೇಲೆ ಶಿವಾ ನಾಯ್ಕ (35) ವಡ್ಡಿನಕೊಪ್ಪದಲ್ಲಿರುವ ಆಕೆಯ ಮನೆಗೆ ನುಗ್ಗಿ ಕುತ್ತಿಗೆಗೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಶಿವಾ ನಾಯ್ಕ್ ಗೂ ಗಾಯಗಳಾಗಿವೆ. ಸದ್ಯಕ್ಕೆ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸವಿತಾ ಮತ್ತು ಶಿವಾ ನಾಯ್ಕ್ ಇಬ್ಬರಿಗೂ ಮದುವೆಯಾಗಿದೆ. ಒಂದೇ ಕಡೆ ಕೆಲಸ ಮಾಡುವಾಗ ಇಬ್ಬರೂ ಸಂಪರ್ಕಕ್ಕೆ ಬಂದಿದ್ದರು. ಅನೇಕ ಬಾರಿ ಹಿರಿಯರು ಬುದ್ಧಿವಾದ ಹೇಳಿದರೂ, ಇಬ್ವರೂ ಸರಿದಾರಿಯಲ್ಲಿ ಹೋಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸವಿತಾ, ಶಿವಾ ನಾಯ್ಕ್ನನ್ನು ದೂರ ಮಾಡಿದ್ದರಿಂದ ಆಕೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಶಿವ ನಾಯ್ಕ್ ಗೆ ಮೂವರು ಚಿಕ್ಕ ಮಕ್ಕಳಿದ್ದಾರೆ.


Share It

You cannot copy content of this page