ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರಿಗೆ ಮಂಡ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದ ಭರ್ಜರಿ ಗೆಲುವು ಲಭಿಸಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರ ವಿರುದ್ಧ ತಮ್ಮ ಪುತ್ರನ ಸೋಲಿನ ನಂತರ, ಮಂಡ್ಯದಲ್ಲಿ ಗೆಲುವು ಮರಳಿ ಪಡೆಯಬೇಕು ಎಂಬ ಕಾರಣದಿಂದ ಸ್ವತಃ ಕುಮಾರಸ್ವಾಮಿ ಅವರೇ ಕಣಕ್ಕಿಳಿದಿದ್ದರು. ಅದು ಅವರಿಗೆ ವರವಾಗಿ ಪರಿಣಮಿಸಿದ್ದು, ಜಯ ಸಿಕ್ಕಿದೆ.
ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ಗೆ ಸುಮಲತಾ ಭಯವನ್ನು ತಪ್ಪಿಸಿತು ಎನ್ನಬಹುದು. ಹೀಗಾಗಿ, ಸುಮಲತಾ ಸೈಲೆಂಟ್ ಆಗುತ್ತಿದ್ದಂತೆ ಜೆಡಿಎಸ್ ಮಂಡ್ಯದಲ್ಲಿ ಭರ್ಜರಿ ಜಯಭೇರಿ ಸಾಧಿಸಿದೆ. ಕುಮಾರಸ್ವಾಮಿ, ಬಿಜೆಪಿ ಜತೆಗಿನ ಮೈತ್ರಿಯನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

