ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣವನ್ನೇ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಹಣ ಮಾಡುವ ದಂಧೆಗೆ ಮುಂಸಾಗಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಕೆಲವು ನಟಿಯರ ಫೋಟೋಗಳನ್ನು ಬಳಸಿ, ಈ ನಟಿಯರ ಬಿಡಿಯೋ ಲಿಂಗ್ ಗಳು ಬೇಕಿದ್ದರೆ, ನಮ್ಮನ್ನು ಸಂಪರ್ಕಿಸಿ ಎಂದು ಬರೆದುಕೊಂಡಿದ್ದಾರೆ. ಕೆಲವು ತೆಲುಗು ನಟಿಯರ ಫೋಟೋಗಳನ್ನು ಬಳಸಿ, ಈ ನಟಿಯರೊಂದಿಗೆ ಪ್ರಜ್ವಲ್ ರೇವಣ್ಣರ ಒಡನಾಟದ ವಿಡಿಯೋಗಳಿವೆ ಎಂದು ಕಿಡಿಗೇಡಿಗಳು ದಂಧೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಹಣಕ್ಕಾಗಿ ಈ ದಂಧೆ ನಡೆಸುತ್ತಿದ್ದು, ಅದರ ಹಿಂದೆ ಬೀಳುವ ಜನರನ್ನು ಹಣ ಕೇಳಿ, ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಈಗಾಗಲೇ ಅನೇಕರು ಹಣ ಕಳೆದುಕೊಂಡಿದ್ದು, ಮಾರ್ಯಾದೆಗೆ ಅಂಜಿ ಯಾರೂ ಈ ಬಗ್ಗೆ ದೂರು ನೀಡುತ್ತಿಲ್ಲ.
ಈಗಾಗಲೇ ಎಸ್ಐಟಿ ಪೆನ್ ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿದೆ. ವಿಡಿಯೋ ಹಂಚಿಕೆ, ಸಂತ್ರಸ್ತರ ಪೋಟೋ ಬಳಕೆಯನ್ನು ಅಪರಾಧ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಹೀಗಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವಿಡಿಯೋ ಹಂಚಿಕೆಯ ಆಮಿಷ ವೊಡ್ಡಿ ಹಣ ಗಳಿಸುವ ದಂಧೆ ನಡೆಸುತ್ತಿದ್ದಾರೆ.
ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್ಐಟಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಘಟನೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
