ಉಪಯುಕ್ತ ರಾಜಕೀಯ ಸುದ್ದಿ

ಈ ಎಲೆಕ್ಷನ್‌ನ ಇಂಟ್ರೆಸ್ಟಿಂಗ್ ಸಂಗತಿಗಳೇನು ಗೊತ್ತಾ?

Share It


ಬೆಂಗಳೂರು: ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿದೆ. ಈಗ ಸರಕಾರ ರಚನೆಯ ಕಸರತ್ತು ಶುರುವಾಗಿದೆ. ಈ ನಡುವೆ ಚುನಾವಣೆ ಫಲಿತಾಂಶದಲ್ಲಿ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳಿದ್ದು, ಅವುಗಳಲ್ಲಿ ಒಂದಷ್ಟು ವಿಷಯಗಳ ಕುರಿತು ಇಲ್ಲಿ ಸ್ಮರಿಸಬಹುದು.

2014 ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವನ್ನೇ ಪಡೆದಿರಲಿಲ್ಲ, ಮಿತ್ರಕೂಟ ಸೇರಿಕೊಂಡು ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಿದ್ದರು. 2019 ರಲ್ಲಿ ಕಾಂಗ್ರೆಸ್ ಸ್ಥಿತಿ ಅಷ್ಟೇನೂ ಸುಧಾರಿಸಿರಲಿಲ್ಲ, ಖರ್ಗೆಯೂ ಸೋತರು. 46 ಸ್ಥಾನಗಳನ್ನಷ್ಟೇ ಪಡೆದುಕೊಂಡಿತ್ತು. ಇದೀಗ ಆ ಸಂಖ್ಯೆ 99 ಕ್ಕೆ ಬಂದು ನಿಂತಿದೆ. ಅಲ್ಲಿಗೆ ಸತತ ಮೂರನೇ ಬಾರಿ ಕಾಂಗ್ರೆಸ್ ಮೂರಂಕಿ ದಾಟಿಲ್ಲ ಎಂಬುದು ವಿಶೇಷ.

ಕರ್ನಾಟಕದಲ್ಲಿ ಮೂರು ಚುನಾವಣೆಯಿಂದ ಕಾಂಗ್ರೆಸ್ ಎರಡಂಕಿ ದಾಟಿಲ್ಲ, ಈ ಸಲ ಮೊದಲಿಗೆ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲೀಡ್‌ನಲ್ಲಿತ್ತು. ಒಂದು ವೇಳೆ ರಾಜ್ಯದಲ್ಲಿ 10 ಸಂಖ್ಯೆಯನ್ನು ದಾಟಿದ್ದರೆ, ದೇಶದಲ್ಲಿ ಶತಕ ಭಾರಿಸಲು ಸಹಾಯಕವಾಗುತ್ತಿತ್ತು. ಆದರೆ, ರಾಜ್ಯದಲ್ಲಿ 9 ಕ್ಕೆ ಮತ್ತು ದೇಶದಲ್ಲಿ 99 ಕ್ಕೆ ಕಾಂಗ್ರೆಸ್ ಔಟಾಗುವ ಮೂಲಕ ಕಾರ್ಯಕರ್ತರಿಗೆ ನಿರಾಸೆ ಮೂಡಿಸಿತು ಎನ್ನಬಹುದು.

ಸಾಮಾನ್ಯವಾಗಿ ಯಾವುದೇ ಪಕ್ಷದ ಅಭ್ಯರ್ಥಿಗಳು ನಮಗೆ ಇಷ್ಟವಿಲ್ಲ ಎಂದಾಗ ಮತದಾರರಿಗೆ ನೋಟಾ ಚಲಾವಣೆಗೆ ದೇಶದಲ್ಲಿ ಅವಕಾಶವಿದೆ. ಇದನ್ನು ಮತದಾರ ಆಗಾಗ ಬಳಕೆ ಮಾಡುತ್ತಿದ್ದಾನಾದರೂ, ನೋಟಾ ಬಳಕೆ ಕಡಿಮೆ. ಆದರೆ. ಈ ಸಲ ಬಹುತೇಕ ಕ್ಷೇತ್ರಗಳಲ್ಲಿ ನೋಟಾ ಮತಗಳು ಮೂರನೇ ಸ್ಥಾನ ಪಡೆದುಕೊಂಡಿವೆ. ಅದರಲ್ಲಿ ಒಂದು ಲೋಕಸಭಾ ಕ್ಷೇತ್ರದಲ್ಲೊ ನೋಟಾ ಮತಗಳೇ ಎರಡನೇ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ.

ಮಧ್ಯಪ್ರದೇಶದ ಇಂದೋರ್ ಕ್ಷೇತ್ರದಲ್ಲಿ ಶಂಕರ್ ಲಾಲ್ವಾನಿ ಎಂಬ ಅಭ್ಯರ್ಥಿ 11.72 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಇದು ದೇಶದ ಅತಿದೊಡ್ಡ ಅಂತರದ ಗೆಲುವಾಗಿ ದಾಖಲಾಗಿದೆ. ಅವರ ಎದುರಾಳಿ ಮತಗಳೆಂದರೆ ಅದು ನೋಟಾ ಮತಗಳು. ಅಲ್ಲಿ 21,800 ನೋಟಾ ಮತಗಳಾಗಿ ಚಲಾವಣೆಯಾಗಿವೆ. ಅಲ್ಲಿನ ಇಂಡಿಯಾ ಮೈತ್ರಿ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದು ನೋಟಾದಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಮೊದಲ ಬಾರಿಗೆ ಮೂರು ಮಹಿಳೆಯರು ಲೋಕಸಭೆ ಪ್ರವೇಶಿಸಿದ್ದಾರೆ, ಚಿಕ್ಕೋಡಿ ಸಂಸದೆಯಾಗಿ ಪ್ರಿಯಾಂಕಾ ಜಾರಕಿಹೊಳಿ, ದಾವಣಗೆರೆ ಸಂಸದೆಯಾಗಿ ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರು ಉತ್ತರದ ಸಂಸದೆಯಾಗಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ. ಉಳಿದಂತೆ ಬಾಗಲಕೋಟೆಯಿಂದ ಸ್ಪರ್ಧೆ ಮಾಡಿದ್ದ ಸಂಯುಕ್ತ ಪಾಟೀಲ್, ಉತ್ತರ ಕನ್ನಡದಲ್ಲಿ ಸ್ಪರ್ಧೆ ಮಾಡಿದ್ದ ಅಂಜಲಿ ನಿಂಬಾಲ್ಕರ್ ಮತ್ತು ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧೆ ಮಾಡಿದ್ದ ಸೌಮ್ಯಾ ರೆಡ್ಡಿ ಸೋಲುಂಡಿದ್ದಾರೆ.

ಈ ಬಾರಿ ಲೋಕಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದರಲ್ಲಿ ಒಬ್ಬರು ಮಹಾರಾಜರ ಮಗ, ಒಬ್ಬರು ಮಾಜಿ ಪ್ರಧಾನಿ ಮಗ, ಇಬ್ಬರು ಮಾಜಿ ಮುಖ್ಯಮಂತ್ರಿ ಮಕ್ಕಳು, ಮೂವರು ಮಾಜಿ ಮುಖ್ಯಮಂತ್ರಿಗಳು, ಮೂವರು ಹಾಲಿ ಸಚಿವರ ಮಕ್ಕಳು, ಒಬ್ಬರು ಮಾಜಿ ಸ್ಪೀಕರ್ ಮತ್ತು ಐದು ಜನ ಮಾಜಿ ಸಚಿವರು. ಎಂಟು ಜನ ತಮ್ಮ ಮೊದಲ ಪ್ರಯತ್ನದಲ್ಲೇ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.


Share It

You cannot copy content of this page