ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಅರೆಸ್ಟ್

Share It

ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಎಂಬುವವರನ್ನ ಬಂಧಿಸಲಾಗಿದೆ.

ಬರೊಬ್ಬರಿ 18 ನಕಲಿ ಖಾತೆ ಸೃಷ್ಟಿಸಿ ಹಣ ವರ್ಗಾಯಿಸಿದ ಆರೋಪದಡಿ ಅರೆಸ್ಟ್​ ಮಾಡಿ 8 ದಿನಗಳ ಎಸ್​ಐಟಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ನಿನ್ನೆ(ಜೂ.04) ಆತನನ್ನು ಪೊಲೀಸರು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ರಾಜ್ಯ ಸರ್ಕಾರ ಪ್ರಕರಣವನ್ನು ಎಸ್​​ಐಟಿಗೆ ನೀಡಿತ್ತು. ಅದರ ಬೆನ್ನೆಲ್ಲೇ ಇದೇ ಜೂನ್​ 01 ರಂದು ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಬಂಧಿಸಿ, ಅವರನ್ನು 6 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿತ್ತು. ಈ ಮಧ್ಯೆ ಇದೀಗ ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷನನ್ನು ಬಂಧಿಸಿ, ಎಸ್​ಐಟಿ ವಶಕ್ಕೆ ಪಡೆದಿದೆ.

ಪ್ರಕರಣದ ಹಿನ್ನೆಲೆ…
ಕೆಲ ದಿನಗಳ ಹಿಂದೆ ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಲೇಚೌಟ್​ನಲ್ಲಿ ರಾತ್ರಿ ಸಮಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧೀಕ್ಷಕ ಚಂದ್ರಶೇಖರ್ ನೇಣಿಗೆ ಶರಣಾಗಿದ್ದರು. ಈ ವೇಳೆ ಆರು ಪುಟಗಳ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ 187.33 ಕೋಟಿ ರೂ. ನಿಗಮ ಅನುದಾನದಲ್ಲಿ 80 ರಿಂದ 85 ಕೋಟಿ ರೂ. ಅವ್ಯವಹಾರ ಆಗಿದೆ.

ಈ ವ್ಯವಹಾರಕ್ಕೆ ತನ್ನನ್ನು ಹಿರಿಯ ಅಧಿಕಾರಿಗಳಾದ ಪದ್ಮನಾಭ್ಮ, ಪರಶುರಾಮ್ ಹಾಗೂ ಬೆಂಗಳೂರು ಎಂ ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ರವುಲ್ ಮೂವರು ಸೇರಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಬರೆದಿದ್ದರು.


Share It

You cannot copy content of this page