ಬೆಂಗಳೂರು: ಚಿಕ್ಕಬಳ್ಳಾಪುರ ರಾಜಕೀಯ ರಂಗು ರಂಗೇರುತ್ತಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸುಧಾಕರ್ ಗೆಲ್ಲುತ್ತಿದ್ದಂತೆವಮಾತಿನಂತೆ ನಡೆದುಕೊಂಡ ಶಾಸಕ ಪ್ರದೀಪ್ ಈಶ್ವರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರದೀಪ್ ಈಶ್ವರ್ ಸುಧಾಕರ್ ವಿರುದ್ಧ ಚುನಾವಣಾ ಭಾಷಣದಲ್ಲಿ ಮಾತನಾಡಿದ ಒಂದು ವಿಡಿಯೋ ತುಣುಕನ್ನುಬಿಟ್ಟುಕೊಂಡು, ಪ್ರದೀಪ್ ಸುಧಾಕರ್ ಚಿಕ್ಕಬಳ್ಳಾಪುರ ದಲ್ಲಿಬೊಂದು ಮತ ಹೆಚ್ಚಿಗೆ ತೆಗೆದುಕೊಂಡರೂ, ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದರು, ಈಗ ಏನ್ಮಾಡ್ತಾರೆ ಎಂದು ಎರಡು ದಿನದಿಂದ ಚರ್ಚೆಯಾಗುತ್ತಿತ್ತು.
ಇದೀಗ ಬುಧವಾರದಿಂದ ಅವರ ಹೆಸರಿನಲ್ಲಿನ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಪೀಕರ್ ಯು.ಟಿ.ಖಾದರ್ ಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಪ್ರದೀಪ್, ಸುಧಾಕರ್ ಗೆಲುವಿನ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದೇ ಬರೆದುಕೊಂಡಿದ್ದಾರೆ ಎನ್ನುವಂತೆ ಬರೆಯಲಾಗಿದೆ.
ಈ ಪತ್ರ ಬಹುತೇಕ ಫೇಕ್ ಆಗಿದ್ದು, ಯಾರೋ ಕಿಡಿಗೇಡಿಗಳು ಸೃಷ್ಟಿಸಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇಂತಹದ್ದೆಲ್ಲ ಕ್ಷುಲ್ಲಕ ಕಾರಣಕ್ಕೆ ಒಂದು ಪ್ರಜಾಸತ್ತಾತ್ಮಕ ಹುದ್ದೆಗೆ ರಾಜೀನಾಮೆ ನೀಡಿದರೆ, ಅದನ್ನು ಸ್ಪೀಕರ್ ಕೂಡ ಸ್ವೀಕಾರ ಮಾಡುವುದಿಲ್ಲ. ಆದಾಗ್ಯೂ ಯಾರೋ ಕಿಡಿಗೇಡಿಗಳು ಇಂತಹ ಪತ್ರ ಸೃಷ್ಟಿಸಿ, ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.
ಈ ನಡುವೆ ಸುಧಾಕರ್ ಗೆಲುವಿಮ ಸಂಭ್ರಮದಲ್ಲಿ ಕೆಲವು ಕಿಡಿಗೇಡಿಗಳು ಶಾಸಕ ಪ್ರದೀಪ್ ಈಶ್ವರ್ ಮನೆಯ ಮೇಲೆ ಕಲ್ಲು ತೂರಿದ್ದು, ಕ್ಷುಲ್ಲಕ ರಾಜಕಾರಣಕ್ಕೆ ಮುಂದಾಗಿದ್ದಾರೆ. ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಅವರನ್ಮು ಬಂಧಿಸುವ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಪ್ರದೀಪ್ ಈಶ್ವರ್ ರಾಜೀನಾಮೆ ಪತ್ರ ವೈರಲ್ ಆಗಿದೆ.
