ರಾಜಕೀಯ ಸುದ್ದಿ

ಅಹಿಂದ ಮತಗಳ ಒಗ್ಗಟ್ಟೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಕಾರಣ: ಉತ್ತೇನಹಳ್ಳಿ ಚಂದ್ರು

Share It

ಚನ್ನರಾಯಪಟ್ಟಣ: ಹಾಸನ ಲೋಕಸಭಾ ಕ್ಷೇತ್ರದ ಅಹಿಂದ ವರ್ಗಗಳ ಮತದಾರರು ಒಗ್ಗಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಫಲವೇ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವಿಗೆ ಪ್ರಮುಖ ಕಾರಣ ಎಂದು ಚನ್ನರಾಯಪಟ್ಟಣ ತಾಲೂಕು ಅಹಿಂದ ಸಂಘಟನೆಯ ಅಧ್ಯಕ್ಷ ಉತ್ತೇನಹಳ್ಳಿ ಚಂದ್ರು ತಿಳಿಸಿದರು.

ಹಾಸನ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾಗಿ ಆಯ್ಕೆಯಾದ ಶ್ರೇಯಸ್ ಪಟೇಲ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಚಂದ್ರುರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲುವ ಮೂಲಕ ಹಾಸನ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಪುನರ್ವರ್ತನೆಯಾಗಿದೆ ಎಂದು ನಾನಾದರೂ ಭಾವಿಸುತ್ತೇನೆ ಎಂದರು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯ ತನಕ 25 ವರ್ಷಗಳ ಕಾಲ ಜೆಡಿಎಸ್ ಪಕ್ಷದ ದಬ್ಬಾಳಿಕೆ,ದೌರ್ಜನ್ಯದ ವಿರುದ್ಧ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಇರುವಂತಹ ವಿಶೇಷವಾಗಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡುವುದರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವಿಗೆ ಕಾರಣರಾಗಿದ್ದಾರೆ,ಇದಕ್ಕೆ ಪ್ರಮುಖ ಕಾರಣ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರು, ಮಲ್ಲಿಕಾರ್ಜುನ ಖರ್ಗೆ ಅವರು, ಡಿಕೆ ಶಿವಕುಮಾರ್ ರವರ ನೇತೃತ್ವವನ್ನು ಮೆಚ್ಚಿ ಇವತ್ತು ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಒಗ್ಗಟ್ಟಾಗಿ ವೋಟು ಕೊಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಫಲರಾಗಿದ್ದಾರೆ ಎಂದು ನಾನಾದ್ರೂ ಭಾವಿಸಿದ್ದೇನೆ ಎಂದರು.

ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ತಕ್ಷಣ ಕೇವಲ ಒಂದು ಸಮುದಾಯದವರು ಮುಂದೆ ನಿಂತುಕೊಳ್ಳುವಂತಹ ಅವಶ್ಯಕತೆ ಇಲ್ಲ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹಿಂದುಳಿದವರು ದಲಿತರು ಅಲ್ಪಸಂಖ್ಯಾತರು ವೋಟು ಹಾಕಿರುವ ಕಾರಣ ಗೆಲ್ಲಲು ಸಾಧ್ಯವಾಗಿರುವುದು ಅದನ್ನು ನೂತನ ಸಂಸದರಾದ ಸನ್ಮಾನ್ಯ ಶ್ರೇಯಸ್ ಪಟೇಲ್ ಅವರು ಮರೆಯಬಾರದು ಎಂದರು. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳ ಮುಖಂಡರುಗಳನ್ನು ವಿಶೇಷವಾಗಿ ಒಟ್ಟೊಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದಾಗ ಮಾತ್ರ ಜಿಲ್ಲೆಯಲ್ಲಿ ಅಹಿಂದ ವರ್ಗಗಳ ಸಮಾಜದ ಬಂಧುಗಳು ವೋಟನ್ನ ಕೊಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ,ಇಲ್ಲವಾದರೆ ಮುಂಚೆ ಇದ್ದ ಸಂಸದರ ರೀತಿಯಲ್ಲಿ ನಡೆದುಕೊಂಡರೆ ಅಥವಾ ಒಂದೇ ಸಮುದಾಯವನ್ನೇ ಮಾತ್ರ ಹೋಲಿಕೆ ಮಾಡುವಂತಹ ಕೆಲಸ ಮಾಡಿದ್ದೆ ಆದಲ್ಲಿ, ಅಹಿಂದ ಸಮುದಾಯ ಮತದಾರರು ವಿರುದ್ಧ ಆಗುವಂತಹ ಸನ್ನಿವೇಶ ಬಾರಿ ದೂರದಲ್ಲಿ ಇರುವುದಿಲ್ಲ ಎಂದು ಎಚ್ಚರಿಸಿದರು.

ಅದಕ್ಕೋಸ್ಕರ ಮಾನ್ಯ ನೂತನ ಸಂಸದರು ಎಲ್ಲರನ್ನೂ ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಾರೆ ಎಂದು ನಾನಾದ್ರೂ ಭಾವಿಸಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಅಹಿಂದ ಮುಖಂಡರಾದ ಯು ಎನ್ ಚಂದ್ರು, ಜೈನ ಸಮಾಜದ ಮುಖಂಡರಾದ ಪುನೀತ್ ಕುಮಾರ್, ದಲಿತ ಸಮಾಜದ ಮುಖಂಡರಾದ ಗುರುರಾಜ್, ಕುರುಬ ಸಮಾಜದ ಮುಖಂಡರಾದ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.


Share It

You cannot copy content of this page