ಬೆಂಗಳೂರು: ಉತ್ತರಖಾಂಡ್ ನಲ್ಲಿ ಮೃತಪಟ್ಟ ಚಾರಣಿಗರ ಮೃತದೇಹಗಳು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.
ಉತ್ತರಾಖಂಡದ ಸಹಸ್ತ್ರತಾಲ್ನಲ್ಲಿ ಚಾರಣ ಮಾಡುವಾಗ ದುರಾದೃಷ್ಟವಶಾತ್ ಹವಾಮಾನ ವೈಪರೀತ್ಯಕ್ಕೆ ರಾಜ್ಯದ ಒಂಬತ್ತು ಚಾರಣಿಗರು ಬಲಿಯಾಗಿದ್ದರು. ಮತ್ತಷ್ಟು ಮಂದಿ ಹವಾಮಾನ ವೈಪರೀತ್ಯದ ಪರಿಣಾಮ ಉಂಟಾದ ಹಿಮಪಾತದದಲ್ಲಿ ಸಿಲುಕಿದ್ದರು. ಅವರನ್ನೆಲ್ಲ ರಕ್ಷಣೆ ಮಾಡಿ ಕರೆತರುವ ಪ್ರಯತ್ನವನ್ನು ರಕ್ಷಣಾ ಪಡೆಗಳು ನಡೆದಿದ್ದವು.
ರಾಜ್ಯದ ಚಾರಣಿಗರು ಸಿಲುಕಿರುವ ಮಾಹಿತಿ ಅಇಗುತ್ತಿದ್ದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಮೃತದೇಹಗಳನ್ನು ರಾಜ್ಯಕ್ಕೆ ತರುವ ಕಾರ್ಯ ನಡೆದಿತ್ತು. ಸತತ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಮೃತ ಒಂಬತ್ತು ಚಾರಣಿಗರ ಮೃತದೇಹಗಳನ್ನು ಸ್ವತಃ ಕೃಷ್ಣಬೈರೇಗೌಡ ನೇತೃತ್ವದಲ್ಲಿ ತರಲಾಗಿದೆ.
ಸಂಕಷ್ಟದಲ್ಲಿ ಸಿಲುಕಿದ್ದ ಇತರೆ ಚಾರಣಿಗರನ್ನು ಖುದ್ದಾಗಿ ಕೃಷ್ಣಬೈರೇಗೌಡ ಅವರೇ ತಮ್ಮ ಜತೆಯಲ್ಲಿ ಡೆಹ್ರಾಡೂನ್ ವಿಮಾನ ನಿಲ್ದಾಣದ ಮೂಲಕ ನೆನ್ನೆ ರಾತ್ರಿಯೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದರು. ಇದೀಗ ಮೃತರ ಶವಗಳು ಆಗಮಿಸಿದ್ದು, ಕೃಷ್ಣ ಬೇರೇಗೌಡ ಆಗಮಿಸಿ,ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡುವ ಕೆಲಸ ಮಾಡಿದರು.

