ರಾಜಕೀಯ ಸುದ್ದಿ

10 ವರ್ಷದ ನಂತರ ಅಧಿಕೃತ ವಿರೋಧ ಪಕ್ಷ ಸ್ಥಾನ ಯಾರಾಗ್ತಾರೆ ಹಾಗಾದ್ರೆ ಕಾಂಗ್ರೆಸ್‌ ವಿಪಕ್ಷ ನಾಯಕ

Share It

ಬೆಂಗಳೂರು: ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಪ್ರವರ್ಧಮಾನದಲ್ಲಿದ್ದ ಮತ್ತು ಸುದೀರ್ಘ ಅವಧಿ ದೇಶದ ಆಡಳಿತ ಮಾಡಿದ್ದ ಕಾಂಗ್ರೆಸ್ ಕಳೆದ 10 ವರ್ಷದಲ್ಲಿ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿರಲಿಲ್ಲ.

ಇದೀಗ ಹತ್ತು ವರ್ಷದ ನಂತರ ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನ ಪಡೆದುಕೊಳ್ಳಲು ಸಜ್ಜಾಗಿದೆ. ಕಾಂಗ್ರೆಸ್ ಸೇರಿ ಇಂಡಿಯಾ ಒಕ್ಕೂಟ 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿವೆ. ಆದರೆ, ಅಧಿಕಾರಕ್ಕೆ ಅಗತ್ಯ ಸಂಖ್ಯೆಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 246 ಸ್ಥಾನಗಳನ್ನು ಪಡೆಯುವ ಮೂಲಕ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಎನಿಸಿಕೊಂಡರೆ, ಎರಡನೇ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ. ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿದ್ದು, ಈ ಸಲದ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ.

ಇದೀಗ ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತು ಸಮಾಲೋಚನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರ ಸಲಹೆ ಪಡೆದುಕೊಳ್ಳುತ್ತಿದೆ. ಪ್ರಸ್ತುತ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರೂ, ಅವರು ವಿಪಕ್ಷ ನಾಯಕನಾಗಲು ಸಾಧ್ಯವಿಲ್ಲ. ಏಕೆಂದರೆ, ಅವರು ಲೋಕಸಭೆ ಸದಸ್ಯರಲ್ಲ. ಹೀಗಾಗಿ, ಬೇರೆಯವರ ಹೆಸರು ಪ್ರಸ್ತಾಪವಾಗಲಿದೆ.

ರಾಹುಲ್ ಗಾಂಧಿಯೇ ಆಗ್ತಾರಾ?: ಇಂಡಿಯಾ ಒಕ್ಕೂಟ ಗೆದ್ದಿದ್ದೇ ಆದರೆ, ಅದರ ಪ್ರಧಾನಿ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ, ಇದೀಗ ಕಾಂಗ್ರೆಸ್ ಅಧಿಕೃತ ವಿಪಕ್ಷವಾಗಿ ಹೊರಹೊಮ್ಮಿದ್ದರೂ, ವಿಪಕ್ಷ ನಾಯಕನನ್ನಾಗಿ ಯಾರನ್ನು ಮಾಡಬೇಕು ಎಂಬ ಪ್ರಶ್ನೆ ಇದೀಗ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ರಾಹುಲ್ ಗಾಂಧಿಯನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆಯೇ ಅಥವಾ ಬೇರೆ ಯಾರನ್ನಾದರೂ ತರುವ ಪ್ರಯತ್ನ ನಡೆಯಲಿದೆಯೇ ಎಂಬುದು ಮುಂದಷ್ಟೇ ನಿರ್ಧಾರವಾಗಬೇಕಿದೆ.

ನಾಳೆಯ ಸಭೆಯಲ್ಲಿ ಅಂತಿಮ ಸಾಧ್ಯತೆ: ಇಂಡಿಯಾ ಒಕ್ಕೂಟ ಅಧಿಕಾರ ಪಡೆಯುವಷ್ಟು ಸ್ಥಾನ ಗಳಿಸದಿದ್ದರೂ, ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಸಹಕಾರ ಕೊಟ್ಟರೆ ಸರಕಾರ ರಚನೆ ಮಾಡುವ ಪ್ರಯತ್ನವನ್ನು ನಡೆಸಿತ್ತು. ಆದರೆ, ಈ ಇಬ್ಬರು ನಾಯಕರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಜತೆಗೆ ಗುರುತಿಸಿಕೊಂಡ ಕಾರಣ, ಸರಕಾರ ರಚನೆಯ ಪ್ರಯೋಗವನ್ನು ಕಾಂಗ್ರೆಸ್ ಕೈಬಿಟ್ಟಿದೆ. ಇದೀಗ ವಿಪಕ್ಷ ನಾಯಕ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ಇಂದು ನಡೆಯುವ ಸಭೆಯಲ್ಲಿ ಅಂತಿಮವಾಗಲಿದೆ.


Share It

You cannot copy content of this page