ಚಿಂತಾಮಣಿ : ನಗರದಲ್ಲಿ ವಿರುವ ಸರ್ಕಾರಿ ಮಹಿಳಾ ಕಾಲೇಜನ ಆವರಣದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು , ಕಾರ್ಯ ಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಇನ್ನೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರು ನಮ್ಮ ಕಾಲೇಜಿನಲ್ಲಿ ಎಲ್ಲಾ ಶಿಕ್ಷಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದ್ದು , ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳು ವಿವಿಧ ತರಹದ ನೃತ್ಯ ಪ್ರದರ್ಶನ ಗಳು, ಆಟಗಳು , ಹಮ್ಮಿಕೊಂಡಿದ್ದರು.ಹಾಗೂ ವಿವಿಧ ತರಹದ ಅಂಗಡಿ ಮುಗಟ್ಡುಗಳನ್ನು ಇಟ್ಟಿ ವ್ಯಾಪರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರು. ಇನ್ನೂ ಕಾರ್ಯಕ್ರಮ ದಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಅದೇ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕರಾದ ವಿನೋಧ , ಭಾರತಿ , ಶಿಲ್ಪ , ರಾಜೇಶ್ , ಅಮರೀಶ್ , ಶ್ರೀ ನಾಥ್ , ಮಂಜುನಾಥ್ , ನರಸಪ್ಪ , ಅಸ್ಮ ಕೆ.ಎಸ್ , ಕಮಲಕ್ಷ್ಮಿ ,ಶಿವಕುಮಾರ್ , ಅರವಿಂದ ರೆಡ್ಡಿ , ಶಮೀಲ್ , ನವೀನ್ ,ಮೇಘನ , ಜಯಂತಿ , ಹರೀಶ್ , ರವಿ , ಹಾಗೂ ಕಾಲೇಜಿನ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.