ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಬೇರೆ ಕಾರಣಗಳಿಗೆ ಬಳಸಿದರೆ ದಂಡ!

Share It

ಬೆಂಗಳೂರು: ಜನರಿಗೆ ಕುಡಿಯೋಕೇ ನೀರು ಸಿಗುತ್ತಿಲ್ಲ, ಕುಡಿಯುವ ನೀರು ದುರ್ಬಳಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರೂ ಕ್ಯಾರೇ ಅನ್ನದ ಮೊಂಡು ಜನರ ಮೇಲೆ ಬೆಂಗಳೂರು ಜಲಮಂಡಳಿ ದಂಡಾಸ್ತ್ರ ಬಳಸಿದೆ. ಕುಡಿಯುವ ನೀರು ವ್ಯರ್ಥ ಮಾಡಿ ಮೊಂಡಾಟವಾಡಿರುವ ಹಲವಾರು ಮಂದಿಯಿಂದ ಬರೊಬ್ಬರಿ 20 ಲಕ್ಷ ರೂ.ಗಳ ದಂಡ ಸಂಗ್ರಹಿಸಲಾಗಿದೆ.

ನಗರದ 8 ಬಿಬಿಎಂಪಿ ವಲಯಗಳಲ್ಲಿ ಕುಡಿಯುವ ನೀರನ್ನು ವಾಹನ ತೊಳೆಯಲು, ಕಟ್ಟಡ ಕಟ್ಟಲು ಬಳಸಿದವರಿಂದ 20.25 ಲಕ್ಷ ರೂ.ಗಳ ದಂಡ ವಸೂಲಿ ಮಾಡಲಾಗಿದೆ. ನಗರದಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಜಲಮಂಡಳಿ ಅಧಿಕಾರಿಗಳು ಅನ್ಯ ಕಾರಣಗಳಿಗೆ ಕುಡಿಯುವ ನೀರು ಬಳಕೆ ಮಾಡಿದರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದರೂ ಕೆಲವರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳದೆ ನೀರು ಪೋಲು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಈ ದಂಡ ವಿಧಿಸಲಾಗಿದೆ.


Share It

You May Have Missed

You cannot copy content of this page