ಆರೋಗ್ಯ ಉಪಯುಕ್ತ

ನಿಮ್ಮ ಮುಖಕ್ಕೆ ಈ ವಸ್ತುಗಳನ್ನು ಹಚ್ಚುತ್ತೀರ !?ಹಾಗಿದ್ರೆ ಇದನ್ನ ಓದಿ

Share It

ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ನಾವು ನಾನಾ ರೀತಿಯ ಸರ್ಕಸ್ ಮಾಡುವುದುಂಟು. ಅದಕ್ಕಾಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತೇವೆ. ಆದ್ರೆ ಅಪ್ಪಿತಪ್ಪಿಯೂ ಮುಖಕ್ಕೆ ಈ ಐದು ವಸ್ತುಗಳನ್ನು ಬಳಸಬೇಡಿ. ಆ ಐದು ಉತ್ಪನ್ನಗಳು ಯಾವುವು ಎಂದು ನೋಡೋಣ ಬನ್ನಿ.

ಬಳಸಬಾರದು ಉತ್ಪನ್ನಗಳು ಯಾವುವೆಂದರೆ

ಬಿಸಿನೀರು

ಸಾಮಾನ್ಯವಾಗಿ ನಾವು ಬಿಸಿ ಬಿಸಿ ನೀರಿನಲ್ಲಿ ಮುಖ ತೊಳೆಯುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಬಿಸಿ ನೀರಿನಲ್ಲಿ ಮುಖ ತೊಳೆಯುವುದರಿಂದ ನಮ್ಮ ಮುಖದ ಕಾಂತಿ ಕುಗ್ಗುತ್ತದೆ. ಜೊತೆಗೆ ನಮ್ಮ ಮುಖದ ಚರ್ಮ ಸುಡುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು ಹಾಗೂ ಮುಖದ ಬಣ್ಣ ಬದಲಾಗಬುದು. ಆದ್ದರಿಂದ ಬಿಸಿನೀರು ಬಳಸುವ ಮುನ್ನ ಎಚ್ಚರ.

ಟೂತ್ ಪೇಸ್ಟ್

ಟೂತ್ ಪೇಸ್ಟ್ ಅನ್ನು ಎಂದಿಗೂ ಮುಖಕ್ಕೆ ಮುಟ್ಟಿಸಬೇಡಿ. ಇದರಲ್ಲಿರುವ ರಾಸಾಯನಿಕಗಳು ಮುಖದಲ್ಲಿ ಮೊಡವೆಗೆ ಹಾಗೂ ಕಪ್ಪು ಚುಕ್ಕೆಗೆ ಕಾರಣವಾಗಬಹುದು. ಅಲ್ಲದೆ ಮುಖದಲ್ಲಿರುವ ಗ್ರಂಥಿಗಳನ್ನು ಮುಚ್ಚಬಹುದು. ಇದರಿಂದ ಮುಖ ಜಡ್ಡುಗಟ್ಟುತ್ತದೆ.

ಕೂದಲಿನ ಉತ್ಪನ

ಕೂದಲಿನ ಉತ್ಪನ್ನಗಳು ಹೆಚ್ಚು ರಾಸಾಯನಿಕ ಭರಿತವಾಗಿರುತ್ತವೆ. ಅವುಗಳು ಮುಖದ ಮೇಲೆ ಬಿದ್ದರೆ ಮುಖದಲ್ಲಿ ಕೆಂಪಗಿನ ಮೊಡವೆಗಳು, ಮುಖದಲ್ಲಿ ಊತ ಕಣ್ಣುಗಳು ಊತ, ಅಲರ್ಜಿ ಹೀಗೆ ಅನೇಕ ಸಮಸ್ಯೆಗಳು
ಉಂಟಾಗುತ್ತದೆ.

ಎಣ್ಣೆಗಳು

ನಾವು ಅಡಿಗೆಗೆ ಬಳುವ ಎಣ್ಣೆಯ ಉತ್ಪನ್ನಗಳು ಕೊಬ್ಬಿನ ಅಂಶವನ್ನು ಹೊಂದಿರುತ್ತವೆ. ಇವುಗಳು ಮುಖದ ರಂಧ್ರಗಳನ್ನು ಮುಚ್ಚಿ ಮೊಡವೆಗಳಿಗೆ ಕಾರಣವಾಗಬಹುದು. ಜೊತೆಗೆ ಮುಖವು ಜಿಡ್ಡು ಗಟ್ಟುತ್ತದೆ. ನಮ್ಮ ಚರ್ಮ ತುರಿಕೆಗೆ ಒಳಗಾಗಬಹುದು.

ಬಾಡಿ ಲೋಶನ್

ಬಾಡಿ ಲೋಶನ್ ಗಳನ್ನು ದಪ್ಪ ಚರ್ಮದ ಭಾಗಗಳಿಗೆ ಮಾತ್ರ ಹಚ್ಚಬೇಕು. ಅಂದ್ರೆ ಬೆನ್ನು ಕಾಲು ಕೈ ಹೀಗೆ ಅನೇಕ ಭಾಗಗಳಿಗೆ ಹಚ್ಚಬಹುದು. ಮುಖಕ್ಕೆ ಹಚ್ಚಬಾರದು . ಮುಖದಲ್ಲಿ ತೆಳುವಿನ ಚರ್ಮ ಇರುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ.

ಆದ್ದರಿಂದ ಮುಖಕ್ಕೆ ಏನನ್ನಾದರೂ ಹಚ್ಚುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ.


Share It

You cannot copy content of this page