ಫ್ಯಾಷನ್ ಸುದ್ದಿ

ಹಾಸಿಗೆ ಖರೀದಿ ಮಾಡಿ ನಿಮ್ಮೆಸರಲ್ಲೊಂದು ಗಿಡ ನೆಡುವ ಕಾರ್ಯಕ್ಕೆ ಕೈಜೋಡಿಸಿ

Share It

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಹಿನ್ನಲೆ ಮ್ಯಾಗ್ನಿಫ್ಲೆಕ್ಸ್ ಬ್ರಾಂಡ್ ನ ಮ್ಯಾಟ್ರೆಸ್ ಖರೀದಿ ಮಾಡುವ ಗ್ರಾಹಕರಿಗೆ ಸಂಸ್ಥೆ ಅವರ ಹೆಸರಿನ ಅಥವಾ ಅವರ ನಾಮಿನಿ ಹೆಸರಿನಲ್ಲಿ ಗಿಡ ನೆಡುವ ಮಹತ್ಕರಾ ಯೋಜನೆಯನ್ನು ಕೈಗೊಂಡಿದೆ .

ಪರಿಸರ ಸುಸ್ಥಿರತೆಗೆ ಆದ್ಯತೆ ನೀಡುವ ಜೊತೆಗೆ ಆರಾಮದಾಯಕ ಭಾವನೆ ನೀಡುವ ಮ್ಯಾಗ್ನಿಜಿಯೊ ಹಾಸಿಗೆಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪರಿಸರದ ಅವನತಿಯಿಂದ ಭೂಮಿಯು ಅನೇಕ ಸವಾಲುಗಳನ್ನು ಎದುರಿಸುತ್ತಿದೆ . ಆಗಾಗಿ ಮ್ಯಾಗ್ನಿಫ್ಲೆಕ್ಸ್ ಇಂಡಿಯಾವು ಸುಸ್ಥಿರ ಭವಿಷ್ಯಕ್ಕೆ ಸಾಕ್ಷಿಯಾಗಿದ್ದು. ಪ್ರತಿ ಮ್ಯಾಗ್ನಿಜಿಯೊ ಖರೀದಿಸಿದವರಿಗೆ ತನ್ನ ಗ್ರಾಹಕರ ಪರವಾಗಿ ಮ್ಯಾಗ್ನಿಫ್ಲೆಕ್ಸ್ ಕಂಪನಿಯೇ ಒಂದು ಸಸಿ ನೆಡಲು ಪ್ರತಿಜ್ಞೆ ಮಾಡಿದ್ದು, ಗ್ರಾಹಕರ ಹೆಸರಿನಲ್ಲಿ ಅಥವಾ ಅವರ ನಾಮಿನಿ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡುತ್ತಿದೆ.

ಮ್ಯಾಗ್ನಿಫ್ಲೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ್ ನಿಚಾನಿ ಅವರು ಮಾತನಾಡಿ ಹವಾಮಾನ ಬದಲಾವಣೆಯೆಂಬ ಅಪಾಯಕಾರಿ ಸ್ಥಿತಿಯು ಎಲ್ಲೋ ದೂರದಲ್ಲಿಲ್ಲ, ಇದು ವಾಸ್ತವವಾಗಿದ್ದು, ಇದು ನಮ್ಮ ಆಯ್ಕೆಗಳನ್ನು ಮರುಪರಿಶೀಲಿಸಲು ಮತ್ತು ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತಿದೆ.

ಇದು ಗ್ರಾಹಕರ ನಡವಳಿಕೆಯಲ್ಲಿ ಬದಲಾವಣೆಗೆ ಕಾರಣವಾಗಿದೆ. ಹೀಗಾಗಿಯೇ ಜನರು ತಮ್ಮ ಪರಿಸರ ಪ್ರಜ್ಞೆಯ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಉತ್ಪನ್ನಗಳನ್ನೇ ಸಕ್ರಿಯವಾಗಿ ಹುಡುಕುತ್ತಿದ್ದಾರೆ. ಗ್ರಾಹಕರಿಗೆ ಆರಾಮದಾಯಕ ಭಾವನೆ ನೀಡುವುದು ಮಾತ್ರವಲ್ಲದೆ ಪರಿಸರ ಸಂರಕ್ಷಣೆ ಜವಾಬ್ದಾರಿಯನ್ನು ಸಹ ಪೂರೈಸಲಾಗುತ್ತಿದೆ ಎಂದರು. ಪ್ರತಿಯೊಬ್ಬರಿಗೂ ಸುಸ್ಥಿರ ಭವಿಷ್ಯವನ್ನು ರೂಪಿಸಲು ಮ್ಯಾಗ್ನಿಜಿಯೊ ಕೊಡುಗೆ ನೀಡಲಿದೆ ಎಂದು ತಿಳಿಸಿದರು.


Share It

You cannot copy content of this page