ಅಪರಾಧ ರಾಜಕೀಯ ಸಿನಿಮಾ ಸುದ್ದಿ

ದರ್ಶನ್ ಬಂಧನ ಪ್ರಕರಣ: ಎಸ್.ಪಿ ಪಿ ಬದಲಾವಣೆ ಬಗ್ಗೆ ಯಾರ ಒತ್ತಡವೂ ಇಲ್ಲ: ಒತ್ತಡ ಹಾಕಿದರೆ ಕೇಳುವುದೂ ಇಲ್ಲ

Share It


ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದ ಎಸ್.ಪಿ ಪಿ ಅವರನ್ನು ಬದಲಾವಣೆ ಮಾಡಲು ನನ್ನ ಮೇಲೆ ಯಾವ ಸಚಿವರ, ಶಾಸಕರ ಒತ್ತಡವಿಲ್ಲ .ನನ್ನ ಮೇಲೆ ಒತ್ತಡ ಹಾಕಿದರೆ ಕೇಳುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ಬದಲಾಯಿಸಲು ಒತ್ತಡ ಹಾಕಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಇಂದು ಪ್ರತಿಕ್ರಿಯೆ ನೀಡಿದರು.

ಕಾನೂನಿನ ಪ್ರಕಾರ ಕ್ರಮ
ಮಾಧ್ಯಮಗಳಲ್ಲಿ ಈ ಬಗ್ಗೆ ಬಿತ್ತರವಾಗುತ್ತಿರುವುದು ಸುಳ್ಳು ಹಾಗೂ ಸತ್ಯಕ್ಕೆ ದೂರವಾದುದು. ಕಾನೂನು ಏನು ಹೇಳುತ್ತದೆಯೋ ಅದನ್ನೇ ಮಾಡುತ್ತೇವೆ ಎಂದರು. ಪೊಲೀಸ್ ನವರಿಗೆ ಪ್ರಕರಣದಲ್ಲಿ ಎಲ್ಲಾ ಸ್ವಾತಂತ್ರ್ಯವನ್ನೂ ನೀಡಿದ್ದು, ಕಾನೂನಿನ ಪ್ರಕಾರ ತನಿಖೆ ಮಾಡಲು ಸೂಚಿಸಲಾಗಿದೆ ಎಂದರು.

ಎಸ್. ಪಿ. ಪಿ. ಬದಲಾವಣೆಯ ಪ್ರಸ್ತಾವನೆ ನನ್ನ ಮುಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.


Share It

You cannot copy content of this page