ತುಮಕೂರು : ಜಿಲ್ಲೆಯಲ್ಲಿ 2024 ರ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ಸ್ವತಃ ದಾಖಲಿಸಲು ಹಾಗೂ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಲು ಜೂನ್ 24 ರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿಗದಿಪಡಿಸಿರುವ ದಿನಾಂಕಗಳದಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತ ಬಾಂಧವರು ತರಬೇತಿಯ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.
ರೈತಬಾಂಧವರು ಆಯಾ ಗ್ರಾಮ ಪಂಚಾಯತಿಗಳಲ್ಲಿ ಜೂನ್ 24 ರಿಂದ ಜುಲೈ 6 ರವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಯಲ್ಲಿ ಜೂನ್ 24 ರಂದು ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮಗಳ ತಾಲ್ಲೂಕುವಾರು ವಿವರ ಇಂತಿದೆ.
ತುಮಕೂರು ತಾಲ್ಲೂಕು :-
ತಾಲ್ಲೂಕಿನ ಊರ್ಡಿಗೆರೆ ರೈತಸಂಪರ್ಕ ಕೇಂದ್ರ, ಕೆ.ಪಾಲಸಂದ್ರ ಸಮುದಾಯಭವನ, ಅರೆಗುಜ್ಜನಹಳ್ಳಿ ಸಮುದಾಯ ಭವನ, ಬೆಳಗುಂಬದ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಸೀತಕಲ್ಲು, ಸ್ವಾಂದೇನಹಳ್ಳಿ, ಗೂಳೂರು, ಹೆತ್ತೇನಹಳ್ಳಿ, ನಾಗವಲ್ಲಿ, ಬಳ್ಳಗೆರೆ ಹಾಗೂ ಹೊನಸಿಗೆರೆ ಗ್ರಾಮ ಪಂಚಾಯತಿಗಳಲ್ಲಿ ಆಯೋಜಿಸಲಾಗಿದೆ.
ಮಧುಗಿರಿ ತಾಲ್ಲೂಕು : ತಾಲ್ಲೂಕಿನ ಚಿನಕವಜ್ರ, ಡಿ.ವಿ.ಹಳ್ಳಿ, ಹೊಸಕೆರೆ, ಐಡಿ ಹಳ್ಳಿ, ದೊಡ್ಡಯಲ್ಕೂರು, ಬಡವನಹಳ್ಳಿ, ದೊಡ್ಡೇರಿ, ಬ್ಯಾಲ್ಯ ಹಾಗೂ ಪುರವರ ಗ್ರಾಮ ಪಂಚಾಯತಿ.
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಬೆಳಗುಲಿ ಸಮುದಾಯ ಭವನ, ಬರಗೂರು ಹಾಲಿನ ಡೈರಿ, ಚೌಳಕಟ್ಟೆ ಪಂಚಾಯತಿಯ ಹಾರೇನಹಳ್ಳಿ ಹಾಲಿನ ಡೈರಿ ಹಾಗೂ ಹಂದನಕೆರೆ, ಮುದ್ದೇನಹಳ್ಳಿ, ಹೊನ್ನೆಬಾಗಿ, ಶೆಟ್ಟಿಕೆರೆ, ಕುಪ್ಪೂರು, ಕೆಂಕೆರೆ, ಗಾಣದಾಳು, ದಸೂಡಿ ಗ್ರಾಮ ಪಂಚಾಯತಿ.
ಗುಬ್ಬಿ : ತಾಲ್ಲೂಕಿನ ಅಮ್ಮನಘಟ್ಟ, ಮೂಕನಹಳ್ಳಿ ಪಟ್ಟಣ, ಹಿಂಡಿಸ್ಕೆರೆ, ಚಂದ್ರಶೇಖರ ಪುರ, ಮಾದಶೆಟ್ಟಿಹಳ್ಳಿ, ಬೆಲವತ್ತ, ಎಂ.ಎನ್.ಕೋಟೆ, ತ್ಯಾಗಟೂರು, ಹಾಗಲವಾಡಿ, ಶಿವಪುರ ಗ್ರಾಮ ಪಂಚಾಯತಿ.
ತುರುವೇಕೆರೆ : ತಾಲ್ಲೂಕಿನ ಗೋಣಿ ತುಮಕೂರು, ಅರೆಮಲ್ಲೇನಹಳ್ಳಿ, ಕೊಡಗೀಹಳ್ಳಿ, ಆನೆಕೆರೆ, ದಂಡಿನಶಿವರ, ಅಮ್ಮಸಂದ್ರ, ಮಾಯಸಂದ್ರ, ಮುತ್ತುಗದಹಳ್ಳಿ ಗ್ರಾಮ ಪಂಚಾಯತಿ.
ತಿಪಟೂರು : ತಾಲ್ಲೂಕಿನ ಹುಚ್ಚಗೊಂಡನಹಳ್ಳಿ, ಈಚನೂರು, ಹೊನ್ನವಳ್ಳಿ, ಗ್ಯಾರಘಟ್ಟ, ಕರಡಿ, ಕುಪ್ಪಾಳು, ನಾಗರಘಟ್ಟ, ನಲ್ಲಿಕೆರೆ ಗ್ರಾಮ ಪಂಚಾಯತಿ.
ಪಾವಗಡ : ತಾಲ್ಲೂಕಿನ ರೊಪ್ಪ, ಪಳವಳ್ಳಿ, ಜೆ.ಅಚ್ಚಮ್ಮನಹಳ್ಳಿ ಗ್ರಾಮಪಂಚಾಯತಿ.
ಶಿರಾ : ತಾಲ್ಲೂಕಿನ ರತ್ನಸಂದ್ರ, ಯಲಿಯೂರು, ಕಳ್ಳಂಬೆಳ್ಳ, ನೇರಲಗುಡ್ಡ, ನಾದೂರು, ಹೆಂದೊರೆ, ದೊಡ್ಡಬಾಣಗೆರೆ ಹಾಗೂ ಹುಲಿಕುಂಟೆ ಗ್ರಾಮ ಪಂಚಾಯತಿ.
ಕುಣಿಗಲ್ : ತಾಲ್ಲೂಕಿನ ಯಡಿಯೂರು, ಕೊಪ್ಪ, ಕೊತ್ತಗೆರೆ, ಮಡಿಕೆಹಳ್ಳಿ, ಕೊಡಗೀಹಳ್ಳಿ, ಅಮೃತೂರು, ಹುತ್ರಿದುರ್ಗ, ಜೋಡಿ ಹೊಸಹಳ್ಳಿ, ಟಿ.ಹೊಸಹಳ್ಳಿ, ಸಂತೆ ಮಾವತ್ತೂರು, ಹುಲಿಯೂರು ದುರ್ಗ, ಡಿ.ಹೊಸಹಳ್ಳಿ ಗ್ರಾಮ ಪಂಚಾಯತಿ.
ಕೊರಟಗೆರೆ : ತಾಲ್ಲೂಕಿನ ಅಕ್ಕಿರಾಂಪುರ, ಕೋಳಾಲ, ಚಿನ್ನಹಳ್ಳಿ, ತೋವಿನಕೆರೆ ಗ್ರಾಮ ಪಂಚಾಯತಿ.
