ತುಮಕೂರು : ತಾಲ್ಲೂಕು ವ್ಯಾಪ್ತಿಯಲ್ಲಿ ಪವತಿ/ ವಾರಸ್ ಖಾತೆ ಆಂದೋಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಪವತಿ ಖಾತೆಗಾಗಿ ಅರ್ಜಿ ಸಲ್ಲಿಸುವವರು ಚಾಲ್ತಿ ಸಾಲಿನ ಪಹಣಿ, ಎಂ.ಆರ್., ಖಾತೆದಾರರ ಮರಣ ಪ್ರಮಾಣ ಪತ್ರ ಹಾಗೂ ನಾಡ ಕಚೇರಿಯಿಂದ ಪಡೆದ ವಂಶವೃಕ್ಷ, ಆಕಾರ್ ಬಂದ್/ಆರ್ಆರ್, ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು.
ಬಹು ವಾರಸುದಾರರುಗಳಿರುವಂತಹ ಪ್ರಕರಣಗಳಲ್ಲಿ ಎಲ್ಲಾ ಉತ್ತರಾಧಿಕಾರಿ(ಯಾರಾದರೂ ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚಿನವರ ಹೆಸರಿನಲ್ಲಿ ಖಾತೆ ಮಾಡಲು)ಗಳ ಪೈಕಿ ಪ್ರತಿಯೊಬ್ಬರೂ ಪ್ರತ್ಯೇಕವಾಗಿ ಅಫಿಡವಿಟ್ ಮೂಲಕ ಪ್ರಮಾಣಿಕರಿಸಿದ್ದಲ್ಲಿ ಅಫಿಡವಿಟ್ನಲ್ಲಿ ಖಾತೆ ಮಾಡಲು ಒಪ್ಪಿರುವವರ ಹೆಸರಿಗೆ ಮಾತ್ರ ಪವತಿ ಖಾತೆ ಮಾಡಲಾಗುವುದು ಎಂದು ತಹಶೀಲ್ದಾರ್ ಸಿದ್ದೇಶ್ ಮನವಿ ಮಾಡಿದ್ದಾರೆ.
