ರಾಜಕೀಯ ಸಿನಿಮಾ ಸುದ್ದಿ

ನಟ ಡಾಲಿಯನ್ನು ಹೊಗಳಿ ಕೊಂಡಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ

Share It

ಮೈಸೂರು: ನಟ ಡಾಲಿ ಧನಂಜಯ್ ನಟನೆ ಮತ್ತು ವ್ಯಕ್ತಿತ್ವವನ್ನು ಹೊಗಳಿ ಕೊಂಡಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾ ಬಿಡುಗಡೆಯಾಗಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಡಾಲಿ ಧನಂಜಯ ಅಮೋಘ ನಟ. ಜತೆಗೆ, ಅಷ್ಟೇ ಹೃದಯವಂತಿಕೆ ಇರುವ ವ್ಯಕ್ತಿಯಾಗಿದ್ದಾರೆ. ಇಂತಹವರು ಬಹಳ ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸಿದ್ದಾರೆ.

ಡಾಲಿ ಧನಂಜಯ ಕರೋನಾ ಕಾಲಘಟ್ಟದಲ್ಲಿ “ಏನಾದರೂ ಆಗು ಮೊದಲು ಮಾನವನಾಗು” ಎಂದು ಟ್ವಿಟ್ ಮಾಡಿದ್ದು, ಬಿಜೆಪಿ ಬೆಂಬಲಿಗರನ್ನು ಕೆರಳಿಸಿತ್ತು. ಅಂದಿನಿಂದ ಈವರೆಗೆ ಬಿಜೆಪಿ ಬೆಂಬಲಿಗರು ಡಾಲಿಯನ್ನು ದ್ವೇಷಿಸುತ್ತಿದ್ದರು. ಕಳೆದ ಲೋಕಸಭೆ ಚುನಾವಣೆಯ ವೇಳೆ ಪ್ರತಾಪ್ ಸಿಂಹ ವಿರುದ್ಧ ಡಾಲಿ ಧನಂಜಯ ಕಣಕ್ಕಿಳಿಯಲಿದ್ದಾರೆ ಎಂಬಷ್ಟರಮಟ್ಟಿಗೆ ಸುದ್ದಿಗಳು ಹರಡಿದ್ದವು.

ಇದೀಗ ಆ ಎಲ್ಲ ವಿರೋಧಾಭಾಸಗಳನ್ನು ಬದಿಗೊತ್ತಿ ಡಾಲಿ ಅಭಿನಯದ ಕೋಟಿ ಸಿನಿಮಾ ವೀಕ್ಷಣೆ ಮಾಡಿರುವ ಪ್ರತಾಪ್ ಸಿಂಹ ಡಾಲಿ ಧನಂಜಯ ಅವರ ಅಭಿನಯ ಮತ್ತು ವ್ಯಕ್ತಿತ್ವವನ್ನು ಕೊಂಡಿದ್ದಾರೆ. ಈ ಇಬ್ಬರು ಹಾಸನ ಮೂಲದವರಾಗಿದ್ದು, ಸ್ನೇಹದಿಂದ ಒಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.


Share It

You cannot copy content of this page