ಅಪರಾಧ ರಾಜಕೀಯ ಸುದ್ದಿ

ರೇವಣ್ಣ ಕುಟುಂಬಕ್ಕೆ ಮತ್ತೊಂದು ಆಘಾತ: ಸೂರಜ್ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ

Share It

ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಬಳಿಕ ಎಚ್.ಡಿ ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್.‌

ಅದೇನೆಂದರೆ ಪ್ರಜ್ವಲ್ ವರ ಅಣ್ಣ, ಎಚ್​.ಡಿ ರೇವಣ್ಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಡಾ ಸೂರಜ್​ ರೇವಣ್ಣ ವಿರುದ್ಧವೂ ಸಹ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆಯ ಅರಕಲಗೂಡು ಜೆಡಿಎಸ್​ ಕಾರ್ಯಕರ್ತನ ಮೇಲೆ ಸೂರಜ್​ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಲಕ್ಷಣ ಆರೋಪದಿಂದ ಎಚ್.ಡಿ. ರೇವಣ್ಣ ಕುಟುಂಬ ಮತ್ತೆ ಮುಜುಗರಕ್ಕೀಡಾದಂತಾಗಿದೆ.

ಡಾ.ಸೂರಜ್ ರೇವಣ್ಣ ಅವರು ಜೂ. 16ರ ರಾತ್ರಿ ತಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತನನ್ನು ಸಹಾಯ ಮಾಡುವುದಾಗಿ ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಹೀಗೆ ಬಲವಂತವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿರುವ ಬಗ್ಗೆ ಜೆಡಿಎಸ್​ ಕಾರ್ಯಕರ್ತ, ಸಿಎಂ, ಗೃಹ ಸಚಿವರು, ಡಿಜಿ ಮತ್ತು ಐಜಿಪಿ ಮತ್ತು ಹಾಸನ ಎಸ್ಪಿಗೆ ದೂರು ನೀಡಿದ್ದಾರೆ.

ಸದ್ಯ ಕಿರಿಯ ಸಹೋದರ ಪ್ರಜ್ವಲ್​ ಇನ್ನೂ ಎಸ್​ಐಟಿ ವಶದಲ್ಲಿರುವಾಗಲೇ ಹಿರಿಯ ಸಹೋದರ ಡಾ. ಸೂರಜ್​ ರೇವಣ್ಣ ವಿರುದ್ಧ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಡಾ.ಸೂರಜ್ ರೇವಣ್ಣ ಜೆಡಿಎಸ್​ ವಿಧಾನಪರಿಷತ್ ಸದಸ್ಯರಾಗಿದ್ದರಿಂದ ಈ ಪ್ರಕರಣವೂ ಸಹ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮೊದಲೇ ಪ್ರಜ್ವಲ್​ ರೇವಣ್ಣ ಪ್ರಕರಣದಿಂದ ರೇವಣ್ಣ, ದೇವೇಗೌಡರ ಕುಟುಂಬ ಮುಜುಗರ ಅನುಭವಿಸಿದೆ. ಸಿಕ್ಕ ಮಾಹಿತಿ ಪ್ರಕಾರ ಸಂತ್ರಸ್ತ ಯುವಕ ಸಿಎಂ, ಗೃಹ ಸಚಿವ ಹಾಗೂ ಡಿಜಿ ಮತ್ತು ಐಜಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದುನೋಡಬೇಕಿದೆ.


Share It

You cannot copy content of this page