ಬೆಂಗಳೂರು: ದೇಶದ ಅಭಿವೃದ್ಧಿಯ ಹೊಸ ಪರ್ವ ಎಂದು ಕಿರಿಕ್ ಪಾರ್ಟಿಯ ಬೆಡಗಿ ರಶ್ಮಿಕಾ ಮಂದಣ್ಣ ಕೊಂಡಾಡಿದ್ದ ಅಟಲ್ ಸೇತುವೆ ಬಿರುಕು ಬಿಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ಚುನಾವಣೆಗೆ ಮೊದಲು ನಟಿ ರಶ್ಮಿಕಾ ಮಂದಣ್ಣ ಅಟಲ್ ಸೇತುವೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದರು. ೨೦೧೪ರ ನಂತರವಷ್ಟೇ ಇಂತಹದ್ದೆಲ್ಲ ಅಭಿವೃದ್ಧಿಯಾಗುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಷ್ಟೆಲ್ಲ ಅಭಿವೃದ್ಧಿ ಎಂದು ಪರೋಕ್ಷವಾಗಿ ಹೇಳಿದ್ದರು.
ಇದೀಗ ಈ ಸೇತುವೆಯಲ್ಲಿ ಬಿರುಕುಬಿಟ್ಟಿದ್ದು, ರಶ್ಮಿಕಾ ಮಂದಣ್ಣ ಅವರನ್ನು ಟ್ಯಾಗ್ ಮಾಡಿ ನೆಟ್ಟಿಗರು ನಿಮ್ಮ ಅಭಿವೃದ್ಧಿಯ ಅವಾಂತರ ನೋಡಿ ಮೇಡಂ ಎಂದು ಕಿಂಡಲ್ ಮಾಡುತ್ತಿದ್ದಾರೆ. ರಶ್ಮಿಕಾ ವಿಡಿಯೋದಲ್ಲಿ ಕಾಣಿಸಿಕೊಂಡ ದಿನವೇ ಕೆಲವರು ಅವರ ಕಾಲೆಳೆದಿದ್ದರು. ಇತ್ತೀಚೆಗೆ ಮಳೆಯಿಂದ ಕೆಸರುಗದ್ದೆಯಂತಾಗಿದ್ದ ಮುಂಬೈ-ಪುಣೆ ರಸ್ತೆಯ ವಿಡಿಯೋ ಹಾಕಿ ಟೀಕಿಸಿದ್ದರು.
ಅಟಲ್ ಸೇತು ಬ್ರಿಡ್ಜ್ ನವಿ ಮುಂಬಯಿ ಮತ್ತು ಮುಂಬಯಿ ನಡುವಿನ ಹಾರ್ಬರ್ ಲಿಂಕ್ ರಸ್ತೆಯಾಗಿದೆ. ಈ ರಸ್ತೆಯನ್ನು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ರಸ್ತೆ ಎಂದು ಕರೆಯಲಾಗುತ್ತದೆ. ಇದನ್ನು ಕೇವಲ ಐದು ತಿಂಗಳಿAದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದು, ಚುನಾವಣೆ ಸಂದರ್ಭದಲ್ಲಿ ರಶ್ಮಿಕಾ ಹಾಡಿ ಕೊಂಡಾಡಿದ್ದರು.
ಇದೀಗ ಸೇತುವೆಯಲ್ಲಿ ಬಿರುಕು ಮೂಡಿದ್ದು, ಸೇತುವೆಯ ನಿರ್ಮಾಣ ಮತ್ತು ಅದರಲ್ಲಾಗಿರುವ ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ರಸ್ತೆಯಲ್ಲಿ ಕಾಣಿಸಿಕೊಂಡಿರುವ ಬಿರುಕು ಮತ್ತು ಹಾರ್ಬರ್ ಲಿಂಕ್ ಸೇತುವೆಗೆ ಸಂಬAಧಿವಿಲ್ಲ. ಇದು ಪುಟ್ಪಾತ್ನಲ್ಲಿ ಕಾಣಿಸಿಕೊಂಡಿರುವ ಬಿರುಕು ಎಂದು ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
