ಸಿವಾನ್: ಕಾಮಗಾರಿ ಹಂತದಲ್ಲಿ ಸೇತುವೆಗಳು ಮುರಿದುಬೀಳುವುದು ಉತ್ತರ ಭಾರತದಲ್ಲಿ ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಬಿಹಾರದಲ್ಲಂತೂ ಒಂದು ವಾರದಲ್ಲಿ ಎರಡನೇ ಸೇತುವೆ ಮುರಿದುಬಿದ್ದಿದೆ.
ಕಳೆದ ಒಂದು ವಾರದಲ್ಲಿ ವರದಿಯಾಗಿರುವ ಎರಡನೇ ಘಟನೆ ಇದಾಗಿದ್ದು, ಬಿಹಾರದಲ್ಲಿ ನಡೆಯುವ ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟದ ಕುರಿತು ಅನುಮಾನಗಳನ್ನು ಈ ಘಟನೆಗಳು ಹೆಚ್ಚಿಸಿವೆ. ಮಹರಾಜ ಗಂಚ್ ವಿಧಾನಸಭಾ ವ್ಯಾಪ್ತಿಯಲ್ಲಿ ಸೇತುವೆ ಮುರಿದುಬಿದ್ದಿದ್ದು, ದಾರೌಂಡಾ ಮತ್ತು ಮಹಾರಾಜ್ ಗಂಜ್ ವ್ಯಾಪ್ತಿಯ ಹಳ್ಳಿಗಳ ಸಂಪರ್ಕಕಕ್ಕೆ ತಡೆಯಾದಂತಾಗಿದೆ. ಇದು 1991 ರಲ್ಲಿ ನಿರ್ಮಾಣವಾಗಿದ್ದ ಸೇತುವೆಯಾಗಿದ್ದು, 20 ಅಡಿ ಉದ್ದದ ಇಟ್ಟಿಗೆಯಿಂದ ನಿರ್ಮಿಸಿದ್ದ ಸೇತುವೆಯಾಗಿತ್ತು ಎಂದು ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಂಗಳವಾರವಷ್ಟೇ ಅರಾರಿಯಾ ಜಿಲ್ಲೆಯಲ್ಲಿ ಸುಮಾರು 180 ಮೀಟರ್ ಉದ್ದದ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿತ ಘಟನೆ ವರದಿಯಾಗಿತ್ತು. ಅರೇರಿಯಾ ಸೇತುವೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಗ್ರಾಮೀಣ ಕಾಮಗಾರಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. ನದಿಗಳು ಮತ್ತು ಇತರ ಜಲಮೂಲಗಳ ಮೇಲೆ ನಿರ್ಮಿಸಲಾದ ವಿವಿಧ ಗಾತ್ರದ ಸೇತುವೆಗಳನ್ನು ಒಳಗೊಂಡ ಇಂತಹ ದುರ್ಘಟನೆಗಳಿಗೆ ಬಿಹಾರ ಇತ್ತೀಚೆಗೆ ಸಾಕ್ಷಿಯಾಗುತ್ತಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳಾಗದಿದ್ದರೂ, ಬಿಹಾರದ ಸಾರ್ವಜನಿಕ ಕಾಮಗಾರಿ ಗುಣಮಟ್ಟವನ್ನು ಅಣಕಿಸುವ ಸ್ಥಿತಿತೆ ತಲುಪಿದೆ.
ಮಹಾರಾಜ್ ಗಂಚ್ ಸೇತುವೆ ಮುರಿದುಬಿದ್ದ ಪ್ರಕರಣಕ್ಕೆ ಸಂಬAಧಿಸಿ ಮಾತನಾಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ, ಸೇತುವೆ ದಾರೌಂಡಾ ಮತ್ತು ಮಹಾರಾಜ್ಗಂಜ್ ಬ್ಲಾಕ್ಗಳ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿತ್ತು. ಇದು ಬಹಳ ಹಳೆಯ ನಿರ್ಮಾಣವಾಗಿದ್ದು, ಕಾಲುವೆ ಮೂಲಕ ನೀರು ಹರಿಯುವಾಗ ಕಂಬಗಳು ಶಿಥಿಲವಾಗಿವೆ ಎನ್ನಲಾಗಿದೆ. ಕಂಬಗಳನ್ನು ಮರುನಿರ್ಮಾಣ ಮಾಡುವವರೆಗೆ ಎರಡು ಭಾಗದ ಹಳ್ಳಿಗಳ ಜನರ ಸಂಪರ್ಕಕ್ಕೆ ಅಗತ್ಯವಾದ ಪಯಾರ್ಯ ಮಾರ್ಗಗಳನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
