ನಿಮಗೆ ಗೊತ್ತಿರುವ ಹಾಗೆ ಹಿಮಾಲಯ ಪರ್ವತವನ್ನು ಬಹಳ ಮಂದಿ ಏರಿದ್ದಾರೆ. ಅನೇಕ ಮಂದಿ ವಿಫಲತೆಯನ್ನು ಕಂಡಿದ್ದಾರೆ. ನಿಮಗೆ ಗೊತ್ತೇ ಈ ವರೆಗೆ ಹಿಮಾಲಯ ಪರ್ವತ ಶ್ರೇಣಿಯ ಕೈಲಾಸ ಪರ್ವತವನ್ನು ಯಾರಿಂದಲೂ ಏರಲು ಸಾಧ್ಯವಾಗಿಲ್ಲ. ಮೌಂಟ್ ಎವರೆಸ್ಟ್ ಗೆ ಹೋಲಿಸಿದರೆ ಇದು ಚಿಕ್ಕದೇ ಆದ್ರೂ ಏಕೆ ಸಾಧ್ಯವಾಗಿಲ್ಲ ಅನ್ನೋದನ್ನು ತಿಳಿಯೋಣ.
ಕೆಲ ಪರ್ವತ ರೋಹಿಗಳು ಹೇಳುವಂತೆ ನಾವು ಪರ್ವತವನ್ನು ಏರಲು ಶುರು ಮಾಡಿದರೆ. ಯಾವುದೋ ಒಂದು ಶಕ್ತಿ ನಮ್ಮನ್ನು ಅತ್ತಲು ಬಿಡುವುದಿಲ್ಲ ಎಂದು ಹೇಳುತಾರೆ.
ಪುರಾಣ ಕಥೆಗಳಲ್ಲಿ ಕೈಲಾಸ ಪರ್ವತದ ಉಲ್ಲೇಖವಿದೆ. ಇದು ಸ್ವರ್ಗದ ಹಾದಿಯನ್ನು ಹೊಂದಿದೆ ಎಂಬ ನಂಬಿಕೆಯಿದೆ. ಹಾಗೆ ಶಿವನ ವಾಸ ಸ್ಥಾನವಾಗಿದೆ. ಎಲ್ಲ ಧರ್ಮಗಳ ಪವಿತ್ರ ಸ್ಥಳವಾಗಿದೆ.
ಟಿಬೆಟ್ ನಲ್ಲಿರುವ ಕೈಲಾಸ ಪರ್ವತವು ಸುಮಾರು 6656 ಮೀಟರ್ ಎತ್ತರವಿದೆ. ಇದು ಬೇರೆ ಪರ್ವತಕ್ಕೆ ಹೋಲಿಸಿದರೆ ಚಿಕ್ಕದೆ. ಟಿಬೆಟ್ ನಲ್ಲಿ ಕೈಲಾಸ ಪರ್ವತಕ್ಕೆ ಅನೇಕ ಪುರಾಣ ಕತೆಗಳಿವೆ. ಬೌದ್ಧ ಸನ್ಯಾಸಿ ಮಿಲರೆಪ ಮಾತ್ರ ಈ ಪರ್ವತವನ್ನು ಏರಿದ್ದಾರೆ ಎಂದು ಕತೆಗಳಲ್ಲಿ ಹೇಳಲಾಗುತ್ತದೆ. ಆದ್ರೆ ಇದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ.
ಈ ಹಿಂದೆ ಸೆರ್ಗೆಯ್ ಸಿಸ್ಟಿಯಾಕೋವ್ ಎಂಬ ರಷ್ಯಾದ ಪರ್ವತಾರೋಹಿ ಕೈಲಾಸ ಪರ್ವತವನ್ನು ಏರಲು ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಅನಾರೋಗ್ಯದಿಂದ ಹಿಂತಿರುಗಿದರು. ಮತ್ತೊಬ್ಬ ಕರ್ನಲ್ ಆರ್ಸಿ ವಿಲ್ಸನ ಎಂಬುವವರು ಪರ್ವತ ಏರಲು ಶುರುಮಾಡಿದಾಗ ತೀವ್ರ ಹಿಮಪಾತ ಕಾಣಿಸಿಕೊಂಡರಿಂದ ಹಿಂತಿರುಗಿದರು.
ನಂತರ ವಿಜ್ಞಾನಿಗಳ ತಂಡವೊಂದು ಪರ್ವತವನ್ನು ಏರಲು ಸಿದ್ಧತೆ ಮಾಡಿಕೊಂಡರು. ಅವರೆಲ್ಲರೂ ಕೆಲ ದಿನಗಳಲ್ಲಿ ಸಾವಿಗೀಡಾದರು. ಇಲ್ಲಿ ಯಾವುದೋ ಒಂದು ಶಕ್ತಿಯಿದೆ. ಅದು ತಡೆಯುತ್ತದೆ ಎಂದು ನಂಬಲಾಗಿದೆ.
